ಭಾರತ, ಏಪ್ರಿಲ್ 5 -- ಐಪಿಎಲ್‌ 18ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಹ್ಯಾಟ್ರಿಕ್‌ ಜಯ ಸಾಧಿಸಿದರೆ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಹ್ಯಾಟ್ರಿಕ್‌ ಸೋಲು ಕಂಡಿದೆ. ಅಲ್ಲದೆ ತವರು ನೆಲ ಚೆಪಾಕ್‌ ಅಂಗಳದಲ್ಲಿ ಈ ಬಾರಿ ಎರಡನೇ ಸೋಲು ಕಂಡಿದೆ. ಚೆಪಾಕ್‌ನಲ್ಲಿ ನಡೆದ ಪಂದ್ಯದಲ್ಲಿ ಮುಗ್ಗರಿಸಿದ ರುತುರಾಜ್‌ ಗಾಯಕ್ವಾಡ್‌ ಪಡೆ, ಐಪಿಎಲ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಕೆಳಕ್ಕೆ ಜಾರಿದೆ. ಅತ್ತ ಸತತ ಗೆಲುವಿನೊಂದಿಗೆ ಅಬ್ಬರಿಸುತ್ತಿರುವ ಅಕ್ಷರ್‌ ಪಟೇಲ್‌ ಪಡೆ, ಮತ್ತಷ್ಟು ವಿಶ್ವಾಸದಿಂದ ಬೀಗುತ್ತಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, 6 ವಿಕೆಟ್‌ ಕಳೆದುಕೊಂಡು 183 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಸಿಎಸ್‌ಕೆ, 5 ವಿಕೆಟ್‌ ಕಳೆದುಕೊಂಡು 158 ರನ್‌ ಗಳಿಸಿತು. ಇದರೊಂದಿಗೆ ಡೆಲ್ಲಿ ಕ್ಯಾಪಟಿಲ್ಸ್‌ ತಂಡ 25 ರನ್‌ಗಳಿಂದ ಗೆದ್ದಿತು.

(ಸುದ್ದಿ ಅಪ್ಡೇಟ್‌ ಆಗಲಿದೆ)

Published by HT Digital Content Services with permission from HT Kannada...