ಭಾರತ, ಏಪ್ರಿಲ್ 1 -- ಕಳೆದ ಕೆಲವು ತಿಂಗಳುಗಳಿಂದ ಬಾಲಿವುಡ್‌ನ ಖ್ಯಾತ ಜೋಡಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿಯ ಕಾರಣದಿಂದಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಆದರೆ ಈ ವಿಚಾರವಾಗಿ ಎಲ್ಲಿಯೂ ಅವರಾಗಲಿ, ಕುಟುಂಬದವರಾಗಲಿ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೂ ಅವರ ವಿಚ್ಛೇದನ ಸುದ್ದಿ ಹರಿದಾಡುತ್ತಲೇ ಇದೆ. ಆದರೂ ಇದು ಸುಳ್ಳು ಎಂಬಂತೆ ಈ ಜೋಡಿ ಆಗಾಗ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆ ಮೂಲಕ ವಿಚ್ಛೇದನದ ವಿಚಾರದ ಕೇವಲ ವದಂತಿ ಅಷ್ಟೇ ಎನ್ನುವುದನ್ನು ಸಾಬೀತುಪಡಿಸುತ್ತಿದ್ದಾರೆ. ಇದೀಗ ಈ ಜೋಡಿ ಮತ್ತೆ ಒಂದಾಗಿ ಕಾಣಿಸಿದೆ, ಅದು ಮಗಳೊಂದಿಗೆ. ಪುಣೆಯಲ್ಲಿ ಇತ್ತೀಚೆಗೆ ನಡೆದ ಕುಟುಂಬದವರ ಮದುವೆಯೊಂದರಲ್ಲಿ ಐಶ್ವರ್ಯಾ, ಅಭಿಷೇಕ್ ಹಾಗೂ ಆರಾಧ್ಯ ಜೊತೆಯಾಗಿ ಡಾನ್ಸ್ ಮಾಡಿದ್ದಾರೆ. ಮಾತ್ರವಲ್ಲ ಸಾಂಪ್ರದಾಯಿಕ ಉಡುಗೆಯಲ್ಲಿ ಮೂರು ಜನ ಮುದ್ದಾಗಿ ಫೋಟೊಗಳಿಗೆ ಫೋಸ್ ನೀಡಿದ್ದಾರೆ.

ಐಶ್ವರ್ಯಾ ರೈ ಬಚ್ಚನ್‌, ಅಭಿಷೇಕ್ ಬಚ್ಚನ್ ಹಾಗೂ ಆರಾಧ್ಯ ಒಟ್ಟಾಗಿ ಡಾನ್ಸ್ ಮಾಡುತ್ತಿರುವ ವಿಡ...