Bengaluru, ಜೂನ್ 12 -- ಬೆಂಗಳೂರು: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ವೃದ್ಧ ದಂಪತಿಯನ್ನು ಹೆದರಿಸಿ ಬೆದರಿಸಿ ವಂಚಿಸಿದ್ದ ಆರೋಪಿಗಳನ್ನು ಆಗ್ನೇಯ ವಿಭಾಗದ ಸೈಬರ್‌ ಪೊಲೀಸರು ಬಂಧಿಸಿದ್ದಾರೆ. ನಾರಾಯಣ ಸಿಂಗ್‌ ಚೌಧರಿ ಮತ್ತು ಈಶ್ವರ್‌ ಸಿಂಗ್‌ ಬಂಧಿತ ಆರೋಪಿಗಳು.ಇವರು ವೃದ್ಧ ದಂಪತಿಗಳಿಂದ ಸುಮಾರು 4.79 ಕೋಟಿ ರೂಪಾಯಿ ಸುಲಿಗೆ ಮಾಡಿದ್ದರು.

ಇವರ ವಿರುದ್ಧ ಮಂಜುನಾಥ್ ಎಂಬುವರು ದೂರು ನೀಡಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಈ ವಂಚಕರು ದಂಪತಿಯನ್ನು ಬೆದರಿಸಿ, ಸೈಬರ್ ವಂಚಕರು ಹಂತ ಹಂತವಾಗಿ 4.79 ಕೋಟಿ ರೂಪಾಯಿ ಸುಲಿಗೆ ಮಾಡಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಬಲವಂತವಾಗಿ ಪಡೆದುಕೊಂಡಿದ್ದರು. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ವೃದ್ಧ ದಂಪತಿ ಸೈಬ‌ರ್ ಠಾಣೆಗೆ ದೂರು ನೀಡಿದ್ದರು ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.

ವೃತ್ತಿಯಿಂದ ಎಂಜಿನಿಯರ್ ಆಗಿದ್ದ ಮಂಜುನಾಥ್ ಅವರು ನೈಜೀರಿಯಾದಲ್ಲಿ 31 ವರ್ಷ ಕೆಲಸ ಮಾಡಿದ್ದ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ...