Bangalore, ಏಪ್ರಿಲ್ 25 -- ಕಸ್ತೂರಿ ರಂಗನ್‌ ಅವರು ಜನಿಸಿದ್ದು 1940 ಅಕ್ಟೋಬರ್‌ 24ರಂದು ಕೇರಳದ ಎರ್ನಾಕುಳಂನಲ್ಲಿ. ಆದರೆ ಅವರು ಹೆಚ್ಚು ಕಾಲ ಕಳೆದಿದ್ದು ಕರ್ನಾಟಕದಲ್ಲಿಯೇ. ಇಸ್ರೋ ಅಧ್ಯಕ್ಷರಾಗಿ ಆನಂತರ ಬೆಂಗಳೂರು ನಿವಾಸಿಯೇ ಆಗಿದ್ದಾರೆ.

ಅಪ್ರತಿಮ ವಿಜ್ಞಾನಿ ಕಸ್ತೂರಿ ರಂಗನ್‌ ಅವರಿಗೆ ಕರ್ನಾಟಕದ ಮೇಲೆ ವಿಶೇಷ ಪ್ರೀತಿ. ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಭಾಸ್ಕರಾಚಾರ್ಯ ಪ್ರಶಸ್ತಿ ಸ್ವೀಕಾರಕ್ಕೆ ಬಂದಾಗ ಡಾ.ಕಸ್ತೂರಿರಂಗನ್‌ ಅವರು ವಿಧಾನಪರಿಷತ್‌ ಸದಸ್ಯರಾಗಿದ್ದ ಅರುಣ್‌ ಶಹಾಪುರ ಅವರೊಂದಿಗೆ ಕಳೆದ ಕ್ಷಣ.

1994ರಿಂದ 2003ರವರೆಗೆ ಇಸ್ರೋ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕಸ್ತೂರಿ ರಂಗನ್ ಅವರು, ಅನೇಕ ರಾಕೆಟ್‌ ಗಳ ಉಡಾವಣೆ, ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಇಸ್ರೋ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿರುವುದು ಅವರ ಹಿರಿಮೆ

ವಿಜ್ಞಾನ ವಿಷಯ ಮಾತ್ರವಲ್ಲದೇ ಶಿಕ್ಷಣ, ಪರಿಸರ, ಸಮುದಾಯದ ಬೆಳವಣಿಗೆ ವಿಚಾರದಲ್ಲಿ ಅವರ ಆಸಕ್ತ ಅಪಾರವಾದದ್ದು. ವಯಸ್ಸು ಎಂಬತ್ತು ದಾಟಿದರೂ ಈಗಲೂ ಸಕ್ರಿಯರಾಗಿ ಎಲ್ಲೆಡೆ ಪ...