ಭಾರತ, ಮಾರ್ಚ್ 1 -- Dr Rajkumar: ಕನ್ನಡದ ಮೇರುನಟ ಡಾ. ರಾಜ್‌ಕುಮಾರ್‌ ಕುರಿತು ಸಂಜಯ್‌ ನಾಗ್‌ ಎಂಬ ಗಾಯಕ ಎಕ್ಸ್‌ನಲ್ಲಿ ಬರೆದ ಪೋಸ್ಟ್‌ವೊಂದು ಸೋಷಿಯಲ್‌ ಮೀಡಿಯಾದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ. "ರಾಜ್‌ಕುಮಾರ್‌ ಅತ್ಯುತ್ತಮ ನಟನಾಗಿರಬಹುದು. ಆದರೆ, ಭಯಾನಕ ಗಾಯಕ" ಎಂದು ಎಕ್ಸ್‌ನಲ್ಲಿ ಸಂಜಯ್‌ ನಾಗ್‌ ಪೋಸ್ಟ್‌ ಮಾಡಿದ್ದರು. ಇದಕ್ಕೆ ಟ್ವಿಟ್ಟರ್‌ನಲ್ಲಿ ಸಾಕಷ್ಟು ಜನರು ಮಾರುತ್ತರ ನೀಡಿದ್ದರು. ಕನ್ನಡಿಗರ ಆಕ್ರೋಶಕ್ಕೆ ಭಯಗೊಂಡು ಸಂಜಯ್‌ ನಾಗ್‌ ಈಗ ತನ್ನ ಟ್ವಿಟ್ಟರ್‌ ಖಾತೆಯನ್ನೇ ಡಿಲೀಟ್‌ ಮಾಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಬೇಳೂರು ಸುದರ್ಶನ ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದ ಪೋಸ್ಟ್‌ ಗಮನ ಸೆಳೆಯುತ್ತದೆ.

"ಅಚಾತುರ್ಯದಿಂದ ಬೈದುಬಿಟ್ಟೆ ಎಂಬ ಅಹಂಕಾರ ಬೇರೆ!! ಡಾ. ರಾಜ್‌ ಕುಮಾರ್ ಅವರಂತಹ ಜನ್ಮಜಾತ ಪ್ರತಿಭೆಯನ್ನು ಹಂಗಿಸುವ ಕ್ಷುದ್ರಜೀವಿ! ಅಯೋಗ್ಯನ್ ತಂದು... ಛೀ ! ಡಾ. ರಾಜ್ ಯಾವುದೇ ಶಾಸ್ತ್ರೀಯ ಕಲ...