ಭಾರತ, ಏಪ್ರಿಲ್ 24 -- ಕನ್ನಡ ಚಿತ್ರರಂಗದಲ್ಲಿ ಡಾ ರಾಜ್‌ಕುಮಾರ್ ಅವರಷ್ಟು ವೈವಿಧ್ಯಮಯ ಪಾತ್ರಗಳನ್ನು ಮಾಡಿದವರು ಸಿಗುವುದಿಲ್ಲ. ಸಾಮಾಜಿಕ ಪಾತ್ರಗಳಲ್ಲದೆ, ಹಲವು ಪೌರಾಣಿಕ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಬರೀ ರಾಮ, ಕೃಷ್ಣ, ಈಶ್ವರ ಮುಂತಾದ ದೇವರ ಪಾತ್ರಗಳಷ್ಟೇ ಅಲ್ಲ, ಹಿರಣ್ಯಕಶಿಪು, ಮಹಿಷಾಸುರ ಮುಂತಾದ ರಾಕ್ಷಸರ ಪಾತ್ರಗಳಲ್ಲೂ ನಟಿಸಿದ್ದಾರೆ. ಈ ಚಿತ್ರಗಳು ಮತ್ತು ಪಾತ್ರಗಳ ಜೊತೆಗೆ ಆ ಮೂರು ಪಾತ್ರಗಳನ್ನು ಸಹ ಮಾಡಿಬಿಟ್ಟಿದ್ದರೆ?

ಯಾವ ಪಾತ್ರಗಳು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಡಾ ರಾಜ್‌ಕುಮಾರ್ ಬಹಳ ಆಸೆಪಟ್ಟು ಮಾಡಬೇಕೆಂದಿದ್ದ ಮೂರು ಚಿತ್ರಗಳಿವೆ. ಆದರೆ, ಕಾರಣಾಂತರಗಳಿಂದ ಆ ಚಿತ್ರಗಳು ತಯಾರಾಗಲೇ ಇಲ್ಲ. ಈ ಪೈಕಿ ಒಂದು ಚಿತ್ರದ ಮುಹೂರ್ತವಾದರೆ, ಇನ್ನೊಂದರ ಹಾಡುಗಳ ಧ್ವನಿಮುದ್ರಣವಾಗಿತ್ತು ಮತ್ತು ಮತ್ತೊಂದು ಚಿತ್ರದ ಘೋಷಣೆಯಾಗಿತ್ತು. ಆದರೆ, ಈ ಚಿತ್ರಗಳು ಕಾರಣಾಂತರಗಳಿಂದ ಮುಂದುವರೆಯಲಿಲ್ಲ.

ಡಾ ರಾಜ್‌ಕುಮಾರ್ ಅಭಿನಯಿಸಬೇಕಿದ್ದ ಮತ್ತು ಮುಹೂರ್ತವೂ ಆಗಿದ್ದ ಚಿತ್ರ 'ಗಂಡುಗಲಿ ಕುಮಾರರಾಮ'. ವಿ...