Bengaluru, ಏಪ್ರಿಲ್ 3 -- Shanmukha Govindaraaj: ಡಾ. ರಾಜ್‌ಕುಮಾರ್‌ ಹಿರಿ ಮಗಳು ಲಕ್ಷ್ಮೀ ಗೋವಿಂದರಾಜು ಅವರ ಪುತ್ರ ಷಣ್ಮುಖ ಗೋವಿಂದರಾಜ್‌ ʻನಿಂಬಿಯ ಬನದ ಮ್ಯಾಗ- ಪೇಜ್‌ 1ʼ (Nimbiya Banada Myaga Page 1) ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟಿದ್ದಾರೆ. ಇನ್ನೇನು ಏಪ್ರಿಲ್‌ 4ರಂದು ಈ ಸಿನಿಮಾ ತೆರೆಗೆ ಬರುತ್ತಿದೆ. ಹಾಡುಗಳಿಂದ ಮತ್ತು ಟ್ರೇಲರ್‌ ಮೂಲಕ ಗಮನ ಸೆಳೆದ ಈ ಸಿನಿಮಾದಲ್ಲಿ ಷಣ್ಮುಖ ಗೋವಿಂದರಾಜ್‌ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಅಣ್ಣಾವ್ರ ಕುಟುಂಬದ ಮತ್ತೊಂದು ಕುಡಿ ಬಣ್ಣದ ಲೋಕಕ್ಕೆ ಆಗಮಿಸಿದೆ. ಷಣ್ಮುಖ ಗೋವಿಂದರಾಜ್ ಸಿನಿಮಾಲೋಕಕ್ಕೆ ಆಗಮಿಸಿದ ಬೆನ್ನಲ್ಲೇ ಕೆಲವರು ಅವರ ಲುಕ್‌ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಬಾಡಿ ಶೇಮಿಂಗ್‌ ಮತ್ತು ನಿಂದನೆಯ ರೀತಿಯ ಕಾಮೆಂಟ್‌ ಹಾಕುತ್ತಿದ್ದಾರೆ.

ವರನಟ, ನಟಸಾರ್ವಭೌಮ ಡಾ ರಾಜ್‌ಕುಮಾರ್‌ ಅವರ ಮುಂದಿನ ಪೀಳಿಗೆ ಈಗಲೂ ಚಿತ್ರರಂಗದಲ್ಲಿ ಸಕ್ರಿಯವಿದೆ. ಅಣ್ಣಾವ್ರ ಬಳಿಕ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಅವರ ಇಬ್ಬರು ಪುತ್ರರು,...