Bengaluru, ಮಾರ್ಚ್ 6 -- Shiva rajkumar about Cancer: ಡಾ. ರಾಜ್‌ ಕುಟುಂಬ ಎಂದರೆ ಕನ್ನಡಿಗರಿಗೆ ಅದೊಂದು ರೀತಿ ದೊಡ್ಮನೆ ಇದ್ದಂತೆ. ಆ ಕುಟುಂಬದ ಮೇಲೆ ನಾಡಿನ ಜನತೆಗೆ ಅದೇನೋ ಗೌರವ. ಆದರೆ, ಇದೇ ಅಣ್ಣಾವ್ರ ಕುಟುಂಬ ಒಂದಿಲ್ಲ ಒಂದು ಕಾರಣಕ್ಕೆ ನಲುಗುತ್ತಿದೆ. ಏಟಿನ ಮೇಲೆ ಏಟು ತಿನ್ನುತ್ತಿದೆ. ಪುನೀತ್‌ ಅಕಾಲಿಕ ನಿಧನದ ಬಳಿಕ, ಇತ್ತೀಚೆಗಷ್ಟೇ ಶಿವರಾಜ್‌ಕುಮಾರ್‌ಗೆ ಕ್ಯಾನ್ಸರ್‌ ಧೃಡವಾಗಿತ್ತು. ಇಡೀ ಕರ್ನಾಟಕ, ಚಿತ್ರರಂಗ ಶಾಕ್‌ಗೆ ಒಳಗಾಗಿತ್ತು. ಇದೀಗ ಇದೇ ಕ್ಯಾನ್ಸರ್‌ ಕಾಯಿಲೆ ಬಗ್ಗೆ, ಮತ್ತು ತಮ್ಮ ಕುಟುಂಬದಲ್ಲಿ ಯಾರೆಗೆಲ್ಲ ಕ್ಯಾನ್ಸರ್‌ ಇತ್ತು ಎಂಬುದರ ಬಗ್ಗೆ ಶಿವಣ್ಣ ಮೊದಲ ಸಲ ಮಾತನಾಡಿದ್ದಾರೆ.

ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್‌ ಕ್ಯಾನ್ಸರ್‌ ಶಸ್ತ್ರ ಚಿಕಿತ್ಸೆ ಪಡೆದು, ಮತ್ತೆ ಹಳೇ ಲಯಕ್ಕೆ ಮರಳುತ್ತಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ 24ರಂದು ಅಮೆರಿಕಾದ ಫ್ಲೋರಿಡಾದಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್​ಸ್ಟಿಟ್ಯೂಟ್​ನಲ್ಲಿ ಶಿವಣ್ಣ ಅವರಿಗೆ ಆಪರೇಷನ್‌ ನಡೆದಿತ್ತು. ಸುದೀರ್ಘ ಐದೂವರೆ ಗಂಟೆಗಳ ಕಾ...