Bengaluru, ಫೆಬ್ರವರಿ 28 -- Dr Rajkumar: ಕರುನಾಡು ಮಾತ್ರವಲ್ಲದೆ ಭಾರತದ ಸಿನಿಮಾರಂಗ ಕಂಡ ಮೇರುನಟರಲ್ಲಿ ಡಾ. ರಾಜ್‌ಕುಮಾರ್‌ ಸಹ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಬರೀ ನಟನೆ ಮಾತ್ರವಲ್ಲದೆ, ಗಾಯನದಲ್ಲಿಯೂ ಮಿಂಚಿದವರು. ಕನ್ನಡಿಗರಿಗೆ ಅವರ ಹಾಡುಗಳೆಂದರೆ ಬಲು ಇಷ್ಟ. ಭಾರತದ ಇತರ ಸೆಲೆಬ್ರಿಟಿಗಳೂ ಅವರ ಹಾಡುಗಳಿಗೆ, ಧ್ವನಿಗೆ ಅಭಿಮಾನಿಗಳಿದ್ದಾರೆ. ಅಷ್ಟೇ ಏಕೆ ಇತ್ತೀಚೆಗಷ್ಟೇ ಚೀನಾದಲ್ಲಿಯೂ ಅಣ್ಣಾವ್ರ ಹಾಡನ್ನು ಅಲ್ಲಿನ ಸೂಪರ್‌ ಮಾರ್ಕೆಟ್‌ನಲ್ಲಿ ಪ್ಲೇ ಮಾಡಲಾಗಿತ್ತು. ಸರ್ವರಿಂದಲೂ ಮೆಚ್ಚುಗೆಯನ್ನೇ ಪಡೆಯುವ ಅಣ್ಣಾವ್ರ ಕಂಠಕ್ಕೆ ಯುವ ಗಾಯಕರೊಬ್ಬರು ಟೀಕೆ ಮಾಡಿದ್ದಾರೆ. ಕೆಟ್ಟ ಗಾಯನ ಎನ್ನುವ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದ್ದಾರೆ.

ಡಾ. ರಾಜ್‌ಕುಮಾರ್‌ ನಟನೆಯ ಜತೆಗೆ ಹಾಡಿನಲ್ಲಿಯೂ ಮುಂದು. ಅದ್ಯಾವ ಮಟ್ಟಿಗೆ ಎಂದರೆ, ಜೀವನಚೈತ್ರ ಚಿತ್ರದ "ನಾದಮಯ ಈ ಲೋಕವೆಲ್ಲ" ಹಾಡಿಗೆ ಧ್ವನಿ ನೀಡಿದ್ದಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಇದೀಗ ಇದೇ ಅಣ್ಣಾವ್ರ ಧ್ವನಿ ಬಗ್ಗೆ ವ್ಯಂಗ್ಯವಾಡಿದ ಗಾಯಕನ ವಿ...