ಭಾರತ, ಏಪ್ರಿಲ್ 24 -- ಕನ್ನಡ ಚಿತ್ರರಂಗದಲ್ಲಿ ಡಾ. ರಾಜಕುಮಾರ್ ಹಲವು ಹೆಗ್ಗಳಿಕೆ ಮತ್ತು ದಾಖಲೆಗೆ ಪಾತ್ರರಾದವರು. ಅವರ ಎಷ್ಟೋ ದಾಖಲೆಗಳನ್ನು ಮುರಿಯುವುದಕ್ಕೆ ಸಾಧ್ಯವಾಗಿಲ್ಲ. ಅದೇ ರೀತಿ ಅವರದ್ದೊಂದು ಅಪರೂಪದ ದಾಖಲೆಯನ್ನು ಕಳೆದ 57 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಯಾವೊಬ್ಬ ನಾಯಕ ನಟರಿಂದಲೂ ಮುರಿಯುವುದಕ್ಕೆ ಸಾಧ್ಯವಾಗಿಲ್ಲ ಎನ್ನುವುದು ವಿಶೇಷ.

ಮಲಯಾಳಂನ ಜನಪ್ರಿಯ ನಟ ಪ್ರೇಮ್‍ ನಜೀರ್ ಅಭಿನಯದ 39 ಚಿತ್ರಗಳು ಒಂದೇ ವರ್ಷ ಬಿಡುಗಡೆಯಾಗಿದ್ದು, ಭಾರತೀಯ ಚಿತ್ರರಂಗದಲ್ಲೇ ಅಪರೂಪದ ದಾಖಲೆ. 1978ರಲ್ಲಿ ಪ್ರೇಮ್ ‍ನಜೀರ್ ಅಭಿನಯದ 39 ಚಿತ್ರಗಳು ಬಿಡುಗಡೆಯಾಗಿದ್ದವಂತೆ. ಮಮ್ಮೂಟ್ಟಿ ಅಭಿನಯದ 36 ಚಿತ್ರಗಳು 1983ರಲ್ಲಿ ಬಿಡುಗಡೆಯಾಗಿದ್ದವು. 1984, 85 ಮತ್ತು 86ರಲ್ಲಿ ಮಮ್ಮೂಟ್ಟಿ ಅಭಿನಯದ 34, 28 ಮತ್ತು 35 ಚಿತ್ರಗಳು ಕ್ರಮವಾಗಿ ಬಿಡುಗಡೆಯಾಗಿದ್ದವು ಎಂದು ಹೇಳಲಾಗುತ್ತದೆ. ಇನ್ನು, ಮೋಹನ್‍ ಲಾಲ್‍ ಅಭಿನಯದ 34 ಚಿತ್ರಗಳು 1986ರಲ್ಲಿ ಬಿಡುಗಡೆಯಾಗಿದ್ದವಂತೆ.

ಕನ್ನಡದ ವಿಷಯದಲ್ಲಿ ಹೇಳುವುದಾದರೆ, ವರ್ಷವೊಂದಕ್ಕೆ ಅತ...