Bengaluru, ಮಾರ್ಚ್ 17 -- Youtuber Dr Bro: ವಿಶ್ವ ಪರ್ಯಟನೆ ಮಾಡುತ್ತ ಕನ್ನಡಿಗರಿಗೆ ಮಾಹಿತಿ ಜತೆಗೆ ಮನರಂಜನೆ ನೀಡುತ್ತಿದ್ದಾರೆ ಬೆಂಗಳೂರು ಮೂಲದ ಗಗನ್‌ ಶ್ರೀನಿವಾಸ್‌ ಅಲಿಯಾಸ್‌ ಡಾ ಬ್ರೋ (youtuber Dr bro). ದೇಶ ವಿದೇಶ ಸುತ್ತುತ್ತ, ಆ ದೇಶದ ಆಚಾರ ವಿಚಾರ, ಸಂಸ್ಕೃತಿ, ಆಹಾರ ಪದ್ಧತಿ, ಕಣ್ಣಿಗೆ ಕಾಣದ ಅಚ್ಚರಿಗಳನ್ನು ಹೆಕ್ಕಿ, ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್‌, ಯೂಟ್ಯೂಬ್‌ನಲ್ಲಿ ಲಕ್ಷಾಂತರ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ಡಾ ಬ್ರೋ, ಮೆಚ್ಚುಗೆಯ ಕೆಲಸದ ಜತೆಗೆ ಆಗೊಮ್ಮೆ, ಈಗೊಮ್ಮೆ ಒಂದಷ್ಟು ಕಾರಣಕ್ಕೆ ಟೀಕೆಗಳನ್ನೂ ಎದುರಿಸಿದ್ದಿದೆ. ಇದೀಗ ಆಟೋಚಾಲಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಡಾ. ಬ್ರೋ ಈ ಹಿಂದೆ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ, ಅಯೋಧ್ಯೆ ಇತಿಹಾಸ ಮತ್ತು ಪುರಾಣದ ಬಗ್ಗೆ ವಿಸ್ತ್ರತ ವಿಡಿಯೋವನ್ನು ಅಲ್ಲಿಯೇ ಹೋಗಿ ಹಂಚಿಕೊಂಡಿದ್ದರು. ಹೀಗೆ ಹಂಚಿಕೊಂಡಿದ್ದೇ ತಡ, ಕೆಲವರು ಡಾ. ಬ್ರೋ ವಿರುದ್ಧ ತಿರುಗಿಬಿದ್ದಿದ್ದರು....