ಭಾರತ, ಏಪ್ರಿಲ್ 1 -- ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಡಾ ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾ ಸ್ಪರ್ಧೆಗೆ ಅರ್ಜಿ ಆಹ್ವಾನ ನೀಡಲಾಗಿದೆ. ನೀವು ನಿಮ್ಮ ಸುಂದರ ಕಥೆಗಳನ್ನು ಕಳಿಸಿ ಬಹುಮಾನ ಗೆಲ್ಲಬಹುದು. ನೀವು ನಿಮ್ಮ ಕಥೆಗಳನ್ನು ಕಳಿಸುವ ಮೊದಲು ಕಡ್ಡಾಯವಾಗಿ ಗಮನಿಸಬೇಕಾದ ಕೆಲವು ಅಂಶಗಳನ್ನು ನಾವಿಲ್ಲಿ ನೀಡಿದ್ದೇವೆ. ಕಥೆಯನ್ನು ಕಳಿಸುವಾಗ ನೀವು ಯಾವ ರೀತಿ ಕಳಿಸಬೇಕು. ಕೊನೆಯ ದಿನಾಂಕ ಯಾವಾಗ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲೇ ಇದೆ ಉತ್ತರ.

ಹುಬ್ಬಳ್ಳಿಯ ಅಕ್ಷರ ಸಾಹಿತ್ಯ ವೇದಿಕೆಯು 'ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಸ್ಪರ್ಧೆ-2025' ಏರ್ಪಡಿಸಿದೆ. ವಿಜೇತರಿಗೆ 5 ಸಾವಿರ ರೂಪಾಯಿಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ಕೊಡಲಾಗುವುದು ಎಂದು ತಿಳಿಸಿದೆ. ಈ ಸ್ಪರ್ಧೆಯನ್ನು ಕಥೆಗಾರ ಡಾ ಪ್ರಹ್ಲಾದ ಅಗಸನಕಟ್ಟೆ ಅವರ ಸ್ಮರಣಾರ್ಥ ಆಯೋಜಿಸಲಾಗಿದೆ. ಕರ್ನಾಟಕದ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಪ್ರತಿ ವ‍ರ್ಷವೂ ಈ ಸ್ಪರ್ಧೆಯನ್ನು ನಡೆಸುತ್ತಾ ಬರಲಾಗುತ್ತಿದೆ. ...