ಭಾರತ, ಏಪ್ರಿಲ್ 30 -- ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಹೊಸ ಆಲೋಚನೆಯ ಹೊಸಬರ ತಂಡದ ಆಗಮನವಾಗಿದೆ. ಚೇತನ್ ಜೋಡಿದಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಟೈಮ್ ಪಾಸ್ ಚಿತ್ರದ ಮೂಲಕ ಪ್ರತಿಭಾನ್ವಿತ ಕಲಾವಿದರು, ತಂತ್ರಜ್ಞರ ಸಮಾಗಮವಾಗಿದೆ. ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡು, ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆಗೊಂಡಿದೆ. ಈ ಸಂಬಂಧವಾಗಿ ಸಿನಿಮಾ ಕುರಿತಾದ ಒಂದಷ್ಟು ವಿವರಗಳನ್ನು ಚಿತ್ರತಂಡ ಹಂಚಿಕೊಂಡಿದೆ.

ಟೈಮ್ ಪಾಸ್ ಚಿತ್ರದ ಮೂಲಕ ಚೇತನ್ ಜೋಡಿದಾರ್ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಸಾಮಾನ್ಯವಾಗಿ ಹೀಗೆ ನಿರ್ದೇಶಕರಾದವರು ಬೇರೆ ಬೇರೆ ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವ ಹೊಂದಿರುತ್ತಾರೆ. ಆದರೆ, ಚೇತನ್ ಜೋಡಿದಾರ್ ಹಿನ್ನೆಲೆ ಭಿನ್ನವಾಗಿದೆ. ಯಾಕೆಂದರೆ, ಅವರು ಈವರೆಗೂ ಯಾವ ನಿರ್ದೇಶಕರ ಬಳಿಯೂ ಕೆಲಸ ಮಾಡಿಲ್ಲ. ಯಾವ ಸಿನಿಮಾ ಶಾಲೆಗಳಲ್ಲಿಯೂ ಕಲಿಕೆ ಮಾಡಿಲ್ಲ. ಸಿನಿಮಾಗಳನ್ನು ನೋಡುತ್ತಾ, ಯೂಟ್ಯೂಬ್ ಮೂಲಕ ನಿರ್ದೇಶನದ ಪಟ್ಟುಗಳನ್ನು...