ಭಾರತ, ಮಾರ್ಚ್ 3 -- ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ತಮ್ಮ ಆಹಾರ ಕ್ರಮದ ಬಗ್ಗೆ ವಿವರಿಸಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, ಪಿವಿ ಸಿಂಧು ತಮ್ಮ ದೈನಂದಿನ ಆಹಾರ ಕ್ರಮವನ್ನು ಬಹಿರಂಗಪಡಿಸಿದರು. ದೇಹಕ್ಕೆ ಅಗತ್ಯವಾಗಿ ಬೇಕಾದ ಅಮೈನೋ ಆಮ್ಲವಿರುವ ಆಹಾರ ಸೇವಿಸುವುದಾಗಿ ತಿಳಿಸಿದ್ದಾರೆ. ಇದು ದೇಹದಿಂದ ಸುಲಭವಾಗಿ ಹೀರಲ್ಪಡುತ್ತದೆ. ಬೆಳಗ್ಗಿನ ಉಪಾಹಾರಕ್ಕೆ ಮೊಟ್ಟೆ ತಿನ್ನುತ್ತಾರೆ. ಇದು ಪ್ರೋಟೀನ್‌ನ ಉತ್ತಮ ಮೂಲವಾಗಿದೆ.

ಪಿವಿ ಸಿಂಧು ತಮ್ಮ ಆಹಾರದ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಬೆಳಗ್ಗೆ ತರಬೇತಿ ತರಬೇತಿ ನೀಡುವುದರಿಂದ ಉಪಾಹಾರಕ್ಕೆ ಎರಡರಿಂದ ಮೂರು ಮೊಟ್ಟೆ ತಿನ್ನುವುದಾಗಿ ತಿಳಿಸಿದ್ದಾರೆ. ಮಧ್ಯಾಹ್ನದ ಊಟಕ್ಕೆ ಸಲಾಡ್, ಬೇಳೆ, ಪನೀರ್ ಅಥವಾ ತರಕಾರಿ ಕರಿ, ಹಸಿರು ಸೊಪ್ಪು, ಸ್ವಲ್ಪ ಅನ್ನ ಮತ್ತು ಮೊಸರು ಇರುತ್ತದೆ.

ರಾತ್ರಿಯ ಊಟ ಕೂಡ ಮಧ್ಯಾಹ್ನದ ಭೋಜನದಂತೆಯೇ ಇರುತ್ತದೆ. ಹೆಚ್ಚಿನ ಪ್ರೋಟೀನ್‌ಗಾಗಿ ಚಿಕನ್ ಬೇಯಿಸಿ ತಿನ್ನುತ್ತಾರೆ. ಕೆಲವೊಮ್ಮೆ, ಪ್ರಯಾಣದಲ್ಲಿರುವಾಗ ಅಥವಾ ವ್ಯಾಯ...