ಭಾರತ, ಫೆಬ್ರವರಿ 24 -- ಡಬ್ಲ್ಯುಪಿಎಲ್‌ನ ಮೊಟ್ಟ ಮೊದಲ ಸೂಪರ್‌ ಓವರ್‌ಗೆ ಬೆಂಗಳೂರು ಸಾಕ್ಷಿಯಾಯ್ತು. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆರ್‌ಸಿಬಿ ಮತ್ತು ಯುಪಿ ವಾರಿಯರ್ಸ್‌ ನಡುವಿನ ಪಂದ್ಯವು ಸೂಪರ್‌ ಓವರ್‌ ಮೂಲಕ ಫಲಿತಾಂಶ ಕಂಡಿತು. ಆರ್‌ಸಿಬಿ ವಿರುದ್ಧ ರೋಚಕ ಪೈಪೋಟಿ ನೀಡಿದ ಯುಪಿ ವಾರಿಯರ್ಸ್‌ ಮೊಟ್ಟ ಮೊದಲ ಸೂಪರ್‌ ಓವರ್‌ ಗೆದ್ದು ಬೀಗಿತು. ಇದರೊಂದಿಗೆ ಆರ್‌ಸಿಬಿ ತಂಡವು ತವರು ನೆಲದಲ್ಲಿ ಸತತ ಎರಡನೇ ಸೋಲು ಕಂಡಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, 6 ವಿಕೆಟ್‌ ಕಳೆದುಕೊಂಡು 180 ರನ್‌ ಗಳಿಸಿತು. ಡೇನಿಯಲ್ ವ್ಯಾಟ್-ಹಾಡ್ಜ್ ಮತ್ತು ಎಲಿಸ್‌ ಪೆರ್ರಿ ಆಕರ್ಷಕ ಅರ್ಧಶತಕ ಸಿಡಿಸಿದರು. ಹಾಡ್ಜ್ 41 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 57 ರನ್‌ ಸಿಡಿಸಿದರು. ಟೂರ್ನಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿರುವ ಪೆರ್ರಿ 56 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 90 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅಲ್ಲದೆ ಆರೇಂಜ್‌ ಕ್ಯಾಪ್‌ ಗೆದ್ದರು.

ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿ...