नई दिल्ली, ಏಪ್ರಿಲ್ 14 -- ಪ್ರಸಕ್ತ ಐಪಿಎಲ್​ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟ್ ಸದ್ದು ಮಾಡುತ್ತಿಲ್ಲ. ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿರುವ ಹಿಟ್​ಮ್ಯಾನ್, ಕಳೆದ ವರ್ಷದಿಂದ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಯಮಿತ ಆಟಗಾರನಾಗಿ ಆಡುವ 11ರಲ್ಲಿ ಸ್ಥಾನ ಪಡೆಯುತ್ತಿಲ್ಲ. ಹೀಗಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚಾಂಪಿಯನ್ ಆಟಗಾರ ತಾನು ಯಾವತ್ತಿದ್ದರೂ ಚಾಂಪಿಯನ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್​​ಗೆ ತಮ್ಮ ಅನುಭವ ಏಕೆ ಬೇಕು ಎಂದೂ ಸಾಬೀತುಪಡಿಸಿದ್ದಾರೆ. ನಿಜ ಹೇಳಬೇಕೆಂದರೆ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ತಂಡದ ಸೋಲಿನ ಕಥೆ ಬರೆದಿದ್ದೇ ರೋಹಿತ್​ ಶರ್ಮಾ.

ಡಗೌಟ್​ನಲ್ಲಿ ಕುಳಿತಿದ್ದ ರೋಹಿತ್​ ಶರ್ಮಾ ಸರಿಯಾದ ಸಮಯಕ್ಕೆ ನಿಖರವಾದ ಸಲಹೆ ಸೂಚನೆಗಳನ್ನು ನೀಡಿದರು. ಪರಿಣಾಮ ಅಜೇಯ ಡೆಲ್ಲಿ ಕ್ಯಾಪಿಟಲ್ಸ್​ ತನ್ನ ಗೆಲುವಿನ ರಥ ನಿಲ್ಲಿಸಿತು. ತನ್ನ ಸ್ಥಾನಕ್ಕೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕರಣ್ ಶರ್...