ಭಾರತ, ಮಾರ್ಚ್ 4 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರ ಕ್ಯಾಚ್​ ಪಡೆದ ಭಾರತ ತಂಡದ ಶುಭ್ಮನ್ ಗಿಲ್ ಅವರಿಗೆ ಅಂಪೈರ್​​ ರಿಚರ್ಡ್ ಇಲ್ಲಿಂಗ್​​ವರ್ತ್​ ಎಚ್ಚರಿಕೆ ನೀಡಿದ್ದಾರೆ. ತನ್ನ ಹತ್ತಿರಕ್ಕೆ ಕರೆದು ವಾರ್ನ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಷ್ಟಕ್ಕೂ ಎಚ್ಚರಿಕೆ ನೀಡಲು ಕಾರಣವಾದರೂ ಏನು? ಚೆನ್ನಾಗಿಯೇ ಕ್ಯಾಚ್ ಪಡೆದರೂ ಎಚ್ಚರಿಸಿದ್ದೇಕೆ ಎಂಬುದು ಹಲವರ ಪ್ರಶ್ನೆ. ಅದಕ್ಕಿಲ್ಲಿದೆ ಉತ್ತರ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ಟ್ರಾವಿಸ್​ ಹೆಡ್​ ಅವರು ಕೂಪರ್ ಕಾನೋಲಿ ಡಕೌಟ್ ಆಗಿದ್ದರ ನಡುವೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಐಸಿಸಿ ಟೂರ್ನಿಗಳಲ್ಲಿ ಮತ್ತೊಮ್ಮೆ ಕಾಡುವ ಮುನ್ಸೂಚನೆ ನೀಡಿದರು. ಆರಂಭದಲ್ಲೇ ಮೊಹಮ್ಮದ್ ಶಮಿ ಅವರಿಂದ ಜೀವದಾನ ಪಡೆದ ಹೆಡ್, ...