ಭಾರತ, ಫೆಬ್ರವರಿ 18 -- ಉತ್ತರ ಅಮೆರಿಕದ ದೊಡ್ಡ ದೇಶ ಕೆನಡಾದಲ್ಲಿ ವಿಮಾನ ದುರಂತ ಸಂಭವಿಸಿದೆ. ಟೊರೊಂಟೊ ಪಿಯರ್ಸನ್ ವಿಮಾನ ನಿಲ್ದಾಣದಲ್ಲಿ ಸೋಮವಾರ (ಫೆ.18) ಹಿಮಪಾತದ ಮಧ್ಯೆ ಡೆಲ್ಟಾ ಏರ್ ಲೈನ್ಸ್ ಪ್ರಾದೇಶಿಕ ಜೆಟ್ ವಿಮಾನವು ತುರ್ತು ಭೂಸ್ಪರ್ಶ ಮಾಡಿದೆ. ತುರ್ತು ಭೂಸ್ಪರ್ಶ ಮಾಡುವಾಗ ವಿಮಾನ ಪಲ್ಟಿಯಾಗಿದೆ. ಹಿಮಾವೃತ ಪ್ರದೇಶದಲ್ಲಿಯೂ ತಣ್ಣನೆ ವಾತಾವರಣದಲ್ಲಿ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಪಘಾತದಿಂದಾಗಿ ವಿಮಾನದಲ್ಲಿದ್ದ 80 ಪ್ರಯಾಣಿಕರ ಪೈಕಿ ಹದಿನೆಂಟು ಜನರಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು ವೈರಲ್‌ ಆಗಿದ್ದು, ವಿಮಾನ ಅಪಘಾತದ ಹಿಂದಿನ ಕೊನೆಯ ಕ್ಷಣಗಳನ್ನು ಸೆರೆಹಿಡಿದಿವೆ.

ಟೊರೊಂಟೊ ವಿಮಾನ ಅಪಘಾತದ ಅಂತಿಮ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜೆಟ್ ಬೆಂಕಿಗೆ ಆಹುತಿಯಾಗುವ ಮೊದಲು ರನ್‌ವೇಯಿಂದ ಜಾರಿ ಬೀಳುವುದನ್ನು ಕಾಣಬಹುದು. ಪ್ರಯಾಣಿಕರು ರೆಕಾರ್ಡ್ ಮಾಡಿದ ಮತ್ತೊಂದು ವಿಡಿಯೋದಲ್ಲಿ, ವಿಮಾನವು ತಲೆಕೆಳಗಾಗಿರುವು...