ಭಾರತ, ಏಪ್ರಿಲ್ 20 -- 69 ಕನ್ನಡ ಸಿನಿಮಾ: ಚಿಕ್ಕಂದಿನಿಂದಲೂ ಬಾಲಿವುಡ್ ನಟ ಹೃತಿಕ್‌ರೋಷನ್ ಅಭಿಮಾನಿಯಾಗಿರುವ ರಾಮ್ ಅವರ ಚಿತ್ರಗಳನ್ನು ನೋಡುತ್ತಾ, ತಾನು ಬಣ್ಣದಲೋಕಕ್ಕೆ ಬರಬೇಕೆಂಬ ತುಡಿತ ಅಂದಿನಿಂದಲೇ ಶುರುವಾಗಿದೆ. ಶಿಕ್ಷಣ ಮುಗಿಸಿ ಅಮೇರಿಕಾದ ಕಂಪೆನಿ ಒಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆ 2022ರಲ್ಲಿ "ನಹಿ ಜ್ಞಾನೇನ ಸದೃಶಂ' ಚಿತ್ರಕ್ಕೆ ನಾಯಕ,ಸಾಹಿತ್ಯ, ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದು, ಪ್ರೇಕ್ಷಕರಿಂದ ಪ್ರಶಂಸೆ ಪಡೆದುಕೊಂಡಿತು. ಇದೇ ಹುಮ್ಮಸ್ಸಿನಿಂದ ಎರಡನೇ ಅನುಭವ ಎನ್ನುವಂತೆ 69 ಸಿನಿಮಾಕ್ಕೆ ನಾಲ್ಕು ಜವಾಬ್ದಾರಿಗಳನ್ನು ಹೊತ್ತುಕೊಂಡು, ಫ್ರೆಂಡ್ಸ್ ಫಂಡಡ್ ಫಿಲಿಂಸ್ ಮತ್ತು ವ್ಯಾಸ ಸ್ಟುಡಿಯೋ ಮೂಲಕ ಬಂಡವಾಳ ಹೂಡಿದ್ದಾರೆ. 'ಒಂದು ಕಾಲದ ಕಥೆ' ಎಂಬ ಅಡಿಬರಹ ಇಂಗ್ಲೀಷ್‌ನಲ್ಲಿ ಹೇಳಿಕೊಂಡಿದೆ.

ಮೊನ್ನೆಯಷ್ಟೇ ಹೃತಿಕ್‌ರೋಷನ್ ಚಿತ್ರೀಕರಣದ ನಿಮಿತ್ತ ಚಿಕಾಗೋಗೆ ಆಗಮಿಸಿದ್ದಾರೆ. ಇದನ್ನು ತಿಳಿದು ಅವರನ್ನು ಭೇಟಿ ಮಾಡಿದ್ದಾರೆ. ಆತ್ಮೀಯವಾಗಿ ಬರಮಾಡಿಕೊಂಡ ಹೃತಿಕ್‌ರೋಷನ್ ಎಲ್ಲವನ್ನು ಕೇಳಿ...