Ahamedabad, ಜೂನ್ 12 -- ಅಹಮಬಾದ್: ಲಂಡನ್‌ನ ಗಟ್‌ವಿಕ್ ಏರ್‌ಪೋರ್ಟ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಗುರುವಾರ ಅಪರಾಹ್ನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಪತನವಾಗಿದೆ. ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಅವರ ಜೀವ ಅಪಾಯಕ್ಕೆ ಸಿಲುಕಿದೆ. ಏರ್‌ ಇಂಡಿಯಾ ಈ ಕಳವಳಕಾರಿ ವಿಚಾರವನ್ನು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದೆ. ದುರಂತಕ್ಕೀಡಾದ ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಅಪರಾಹ್ನ 1.38ಕ್ಕೆ ಹಾರಾಟ ಶುರುಮಾಡಿತ್ತು.

ಬೋಯಿಂಗ್ ಬಿ787 ವಿಮಾನವು (AI171) ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ನ ಗಾಟ್‌ವಿಕ್‌ಗೆ ಗುರುವಾರ (ಜೂನ್ 12) ಅಪರಾಹ್ನ 1.38ಕ್ಕೆ ಹೊರಟಿತ್ತು. ಹಾರಾಟ ಆರಂಭಿಸಿದ ಐದೇ ನಿಮಿಷಕ್ಕೆ ವಿಮಾನ ನಿಲ್ದಾಣದ ಸಮೀಪವೇ ಇರುವ ಮೇಘನಿನಗರ ಪ್ರದೇಶದಲ್ಲಿ ಪತನವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ ಎಂದು ಏರ್ ಇಂಡಿಯಾ ಎಕ್ಸ್‌ ಖಾತೆಯ ಮೂಲಕ ಅಪ್ಡೇಟ್ ಮಾಡಿದೆ.

1) ವಿಮಾನ ದುರಂತದ ಕಾರಣ ಅಹಮದಾಬಾದ್ ವಿಮಾನ ನಿಲ್ದಾಣವನ್ನು ತಾತ್ಕಾಲ...