ಭಾರತ, ಮಾರ್ಚ್ 12 -- ವರುಣ್ ಚಕ್ರವರ್ತಿ ಎಂದರೆ ಇವತ್ತು ಎಲ್ಲರಿಗೂ ಗೊತ್ತು . ಚಾಂಪಿಯನ್ ಟ್ರೋಫಿ ಗೆಲ್ಲುವಲ್ಲಿ ಈತನ ಯೋಗಾಧಾನ ಬಹಳವಿದೆ. ಈತನ ಕಥೆಯೂ ಅಷ್ಟೇ ರೋಚಕವಿದೆ. ವರುಣ್ ಚಕ್ರವರ್ತಿಗೆ ಕ್ರಿಕೆಟ್ ಎಂದರೆ ಪ್ರಾಣ. ಆದರೆ ಆತ ಅಂಡರ್ 13, 15, 19 ಯಾವುದರಲ್ಲೂ ಸೆಲೆಕ್ಟ್ ಆಗುವುದಿಲ್ಲ. ಸಿನಿಮಾದಲ್ಲೂ ಸಣ್ಣಪುಟ್ಟ ರೋಲ್ ಮಾಡುತ್ತಾರೆ. ಅಲ್ಲೂ ಕೂಡ ಹೇಳಿಕೊಳ್ಳುವ ಬ್ರೇಕ್ ಸಿಕ್ಕುವುದಿಲ್ಲ. ಆರ್ಕಿಟೆಕ್ಟ್ ವಿದ್ಯಾಭ್ಯಾಸ ಮಾಡುತ್ತಾರೆ. ಅಲ್ಲಿ ಕೂಡ 6 ವರ್ಷ ಕಳೆದು ಹೋಗುತ್ತದೆ. ಅವರಿಗೆ ಅದು ಇಷ್ಟವಾಗುವುದಿಲ್ಲ. ಅವರಪ್ಪನಿಗೆ ಕರೆ ಮಾಡಿ ಕೆಲಸ ಬಿಡುತ್ತಿದ್ದೇನೆ ಎಂದು ಹೇಳಿರುತ್ತಾರೆ.

ಅವರಿಗೆ ನಿಜಕ್ಕೂ ಇಷ್ಟವಿದ್ದದ್ದು ಕ್ರಿಕೆಟ್. ಮತ್ತೆ ಮರಳಿ ಟೆನಿಸ್ ಬಾಲ್ ಕ್ರಿಕೆಟ್​ಗೆ ಮರಳುತ್ತಾರೆ. ಅಲ್ಲಿ ಅವರು ಗಳಿಸಿದ ಯಶಸ್ಸು , ಅವರನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಅಚಾನಕ್ಕಾಗಿ ಅವರು ಇಂಡಿಯನ್ ಟೀಮ್​ಗೆ ಹೇಗೆ ಬಂದು ಬಿಟ್ಟರು? ಎನ್ನುವುದು ಪ್ರಶ್ನೆ. ಆ ದಾರಿ ಕೂಡ ಸುಗಮವಾಗಿರಲಿಲ್ಲ.

ಆಲ್​​ರೌಂಡರ್​ ಆಗಿ ಟೆನಿ...