ಭಾರತ, ಏಪ್ರಿಲ್ 8 -- ಭಾರತದ ಟೆನಿಸ್ ದಿಗ್ಗಜ ರೋಹನ್ ಬೋಪಣ್ಣ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಅಮೆರಿಕದ ಜೊತೆ ಆಟಗಾರ ಬೆನ್ ಶೆಲ್ಟನ್ ಅವರೊಂದಿಗೆ, ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೂರ್ನಿಯ 32ನೇ ಸುತ್ತಿನ ಪಂದ್ಯವನ್ನು ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಅರ್ಜೆಂಟೀನಾ ಹಾಗೂ ಚಿಲಿಯ ಜೋಡಿಯಾದ ಫ್ರಾನ್ಸಿಸ್ಕೊ ​​ಸೆರುಂಡೊಲೊ ಹಾಗೂ ಅಲೆಜಾಂಡ್ರೊ ಟ್ಯಾಬಿಲೊ ಅವರನ್ನು ಸೋಲಿಸುವ ಮೂಲಕ ರೋಚಕವಾಗಿ ಗೆದ್ದ ಈ ಜೋಡಿ, ದಾಖಲೆ ಮಾಡಿದೆ. ಬೋಪಣ್ಣ ತಮ್ಮ ವಯಸ್ಸನ್ನು ಮೀರಿಸಿ ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಾಬಲ್ಯ ಮುಂದುವರೆಸಿದ್ದಾರೆ.

ಭಾನುವಾರ (ಏಪ್ರಿಲ್ 6) ನಡೆದ ಪಂದ್ಯಾವಳಿಯಲ್ಲಿ ಬೋಪಣ್ಣ ಮತ್ತು ಶೆಲ್ಟನ್ ಜೋಡಿ 6-3 ಮತ್ತು 7-5 ಅಂತರದಿಂದ ನೇರ ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು. ಇಂಡೋ-ಅಮೆರಿಕನ್ ಜೋಡಿ ಮುಂದೆ ಮಂಗಳವಾರ (ಏಪ್ರಿಲ್ 8) ನಡೆಯಲಿರುವ 16ನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಜೋಡಿ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸೋರಿ ಅವರನ್ನು ಎದುರಿಸಲಿದ್ದಾರೆ.

ಬೋಪಣ್ಣ ಅವರಿಗೆ ಈಗ 45 ವರ್ಷ ವಯಸ...