Bengaluru, ಜನವರಿ 31 -- ಶ್ರೀಮದ್‌ ಭಗವದ್ಗೀತೆಯು ಜ್ಞಾನದ ಭಂಡಾರವಾಗಿದೆ. ಇದು ಮನುಷ್ಯನಿಗೆ ಜೀವನದ ಸರಿಯಾದ ದಿಕ್ಕನ್ನು ತೋರಿಸುತ್ತದೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಭಗವದ್ಗೀತೆಯ ಉಪದೇಶಗಳು ಸಹಾಯ ಮಾಡಿದವು. ಅಷ್ಟೇ ಅಲ್ಲದೇ ಶ್ರೀಕೃಷ್ಣ ಪರಮಾತ್ಮನು ತನ್ನ ವಿಶ್ವರೂಪವನ್ನು ತೋರಿಸಿದನು. ಭಗವದ್ಗೀತೆಯನ್ನು ಓದುವುದರಿಂದ ಅಪಾರವಾದ ಜ್ಞಾನ ಸಿಗುವುದರ ಜೊತೆಗೆ ಮನಸ್ಸಿಗೆ ಶಾಂತಿ, ನೆಮ್ಮದಿ ಮತ್ತು ಸಂತೋಷವು ದೊರಕುತ್ತದೆ. ಇದು ನಿಜವಾದ ಅರ್ಥದಲ್ಲಿ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ತೋರಿಸುತ್ತದೆ. ಕೆಲವರು ಒಂದಲ್ಲಾ ಒಂದು ವಿಚಾರಕ್ಕೆ ಸದಾ ಚಿಂತಿಸುತ್ತಿರುತ್ತಾರೆ. ನಿರಾಶೆ, ಹತಾಶೆಯ ಭಾವನೆಗಳನ್ನು ಬೆಳೆಸಿಕೊಂಡಿರುತ್ತಾರೆ. ಗೀತೆಯಲ್ಲಿ ಇಂತಹ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು. ಆಗ ಮಾತ್ರ ಮನುಷ್ಯ ಉತ್ತಮನಾಗಿ ಬಾಳಲು ಸಾಧ್ಯ ಎಂದು ಹೇಳಲಾಗಿದೆ.

1. ಜೀವನದಲ್ಲಿ ಹಿಂದೆ ನಡೆದದ್ದೆಲ್ಲವೂ, ಈಗ ಆಗುತ್...