Bengaluru, ಫೆಬ್ರವರಿ 10 -- Seetha Rama Serial Actress Vaishnavi Gowda: ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ರ ಬದಲು ಸಂಜೆ 5:30ಕ್ಕೆ ಸೀತಾ ರಾಮ ಸೀರಿಯಲ್‌ ಪ್ರಸಾರ ಕಾಣುತ್ತಿದೆ. ಇನ್ನೇನು ಶೀಘ್ರದಲ್ಲಿಯೇ ಈ ಸೀರಿಯಲ್‌ ಅಂತ್ಯವಾಗಲಿದೆ, ಆ ಕಾರಣಕ್ಕೆ ಜೀ ಕನ್ನಡ ವಾಹಿನಿ ಇಂಥ ನಿರ್ಧಾರ ಕೈಗೊಂಡಿರಬಹುದು ಎಂದೂ ಹೇಳಲಾಗಿತ್ತಿದೆ. ಆದರೆ, ಧಾರಾವಾಹಿ ಅಂತ್ಯದ ಬಗ್ಗೆ ಈ ವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ, ಕಥೆಯಲ್ಲಿ ಮಾತ್ರ ಹೊಸ ಹೊಸ ಟ್ವಿಸ್ಟ್‌ಗಳು ವೀಕ್ಷಕನಿಗೆ ಸಿಗುತ್ತಿವೆ. ಈ ನಡುವೆ ಇದೇ ಸೀರಿಯಲ್‌ನ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ವಿಡಿಯೋ ಮೂಲಕ ಆಗಮಿಸಿದ್ದಾರೆ.

ಹೌದು, ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯರಿರುವ ನಟಿ ವೈಷ್ಣವಿ ಗೌಡ, ಆಗೊಂದು ಈಗೊಂದು ಬಗೆಬಗೆ ವಿಡಿಯೋ, ಫೋಟೋ ಗೊಂಚಲುಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಕಮರ್ಷಿಯಲ್‌ ಉತ್ಪನ್ನಗಳನ್ನೂ ಪ್ರಮೋಟ್‌ ಮಾಡುತ್ತಿರುತ್ತಾರೆ. ಇದೀಗ ಇದೇ ನಟಿ, ಹೊಸ ಜಾಹೀರಾತೊ...