ಭಾರತ, ಮಾರ್ಚ್ 15 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಿಸ್ಟರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ 5 ವಿಕೆಟ್​ ಗೊಂಚಲು ಸೇರಿ 9 ವಿಕೆಟ್ ಕಿತ್ತು ಭಾರತ 3ನೇ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತರ್ವಹಿಸಿದ್ದ ವರುಣ್ ತನಗೆ 2021ರ ಟಿ20 ವಿಶ್ವಕಪ್ ನಂತರ ಬೆದರಿಕೆ ಕರೆಗಳು ಬಂದಿರುವುದಾಗಿ ರಿವೀಲ್ ಮಾಡಿದ್ದಾರೆ. ಆ ಟಿ20 ವಿಶ್ವಕಪ್​ನಲ್ಲಿ ಬೀದರ್ ಮೂಲದವರೂ ಆದ ತಮಿಳುನಾಡು ಕ್ರಿಕೆಟಿಗನಾದ ಚಕ್ರವರ್ತಿ ಕಣಕ್ಕೆ ಇಳಿದಿದ್ದ 3 ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್​​ ಪಡೆದಿರಲಿಲ್ಲ.

ಐಪಿಎಲ್​ನಲ್ಲಿ ಅಬ್ಬರದ ಪ್ರದರ್ಶನ ನೀಡಿದ ಹಿನ್ನೆಲೆ ಭಾರತ ತಂಡಕ್ಕೆ ವರುಣ್ ಆಯ್ಕೆ ಆಗಿದ್ದರು. ಅದರಂತೆ ಯುಎಇ ಮತ್ತು ದುಬೈನಲ್ಲಿ ಜರುಗಿದ ಪ್ರತಿಷ್ಠಿತ ಟಿ20 ವಿಶ್ವಕಪ್​ಗೂ ​ಸ್ಪಿನ್ನರ್ ಆಯ್ಕೆಯಾಗಿದ್ದರು. ಏಕೆಂದರೆ ಅದೇ ವರ್ಷ ಯುಎಇನಲ್ಲಿ ನಡೆದಿದ್ದ ಐಪಿಎಲ್​ನಲ್ಲಿ ಕೆಕೆಆರ್ ಪರ ವಿಕೆಟ್ ಬೇಟೆಯಾಡಿದ್ದ ಕಾರಣ ಅವರನ್ನು ರಾಷ್ಟ್ರ...