ಭಾರತ, ಮೇ 27 -- ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಆರ್​ಸಿಬಿ ಬ್ಯಾಟರ್​ ವಿರಾಟ್ ಕೊಹ್ಲಿ ಐಪಿಎಲ್​​ನಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ.

30 ಎಸೆತಗಳಲ್ಲಿ 10 ಬೌಂಡರಿ ಸಹಿತ 54 ರನ್ ಬಾರಿಸಿದ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಡೇವಿಡ್ ವಾರ್ನರ್ ಅವರ ಅರ್ಧಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇದಕ್ಕೂ ಮುನ್ನ ವಾರ್ನರ್​​ರ ಸಾರ್ವಕಾಲಿಕ ಅರ್ಧಶತಕಗಳ ದಾಖಲೆ ಸರಿಗಟ್ಟಿದ್ದರು.

ಶ್ರೀಮಂತ ಲೀಗ್​ 63ನೇ ಅರ್ಧಶತಕ ಬಾರಿಸಿ ಕೊಹ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ. ಲೀಗ್​ನಲ್ಲಿ ಇಷ್ಟು ಅರ್ಧಶತಕ ಬಾರಿಸಿದ ಮೊದಲ ಆಟಗಾರನೂ ಹೌದು.​ 62 ಅರ್ಧಶತಕ ಬಾರಿಸಿದ್ದ ವಾರ್ನರ್ ದಾಖಲೆ ಸರಿಗಟ್ಟಿದ್ದ ಕೊಹ್ಲಿ, ಇದೀಗ ಮುರಿದು ಹಾಕಿದ್ದಾರೆ.

ಐಪಿಎಲ್​ನಲ್ಲಿ ಒಟ್ಟಾರೆ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿರುವ ಕೊಹ್ಲಿ 71 ಸಲ 50+ ಸ್ಕೋರ್ (8 ಶತಕಗಳು ಸೇರಿ) ...