ಭಾರತ, ಮಾರ್ಚ್ 6 -- ತವರಿನಲ್ಲಿ ನಡೆದ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವ ಮೂಲಕ ಸಾಕಷ್ಟು ಟೀಕೆ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ ಬೆಂಬಲಕ್ಕೆ ಅವರ ತಂದೆ ಅಜಮ್ ಸಿದ್ದಿಕ್ಕಿ ನಿಂತಿದ್ದಾರೆ. ಬಾಬರ್ ಆಡಿದ 3 ಪಂದ್ಯಗಳಲ್ಲಿ 43.50ರ ಬ್ಯಾಟಿಂಗ್ ಸರಾಸರಿಯಲ್ಲಿ 87 ರನ್ ಗಳಿಸುವ ಮೂಲಕ ನಿರಾಸೆ ಮೂಡಿಸಿದರು. ಬಾಬರ್ ಅಜಮ್ ಅವರ ತಂದೆ ತಮ್ಮ ಮಗನ ಪ್ರದರ್ಶನವನ್ನು ಸಮರ್ಥಿಸಿಕೊಂಡಿದ್ದು, ಟೀಕಾಕಾರರಿಗೆ ಸೂಕ್ತ ಉತ್ತರ ನೀಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಬಾಬರ್ ಅರ್ಧಶತಕ ಸಿಡಿಸಲು ತೆಗೆದುಕೊಂಡಿದ್ದು 81 ಎಸೆತಗಳನ್ನು. ಒಟ್ಟಾರೆ 64 ರನ್ ಗಳಿಸಿ ಟೀಕೆಗೆ ಗುರಿಯಾಗಿದ್ದರು. ಭಾರತ ವಿರುದ್ಧ 23 ರನ್ ಗಳಿಸಿದ್ದ ಬಾಬರ್ ವೈಫಲ್ಯ ಅನುಭವಿಸಿದ್ದರು. ಇದರ ಬೆನ್ನಲ್ಲೇ ಸ್ವತಃ ಪಾಕಿಸ್ತಾನದ ಮಾಜಿ ಕ್ರಿಕೆಟರ್​ಗಳೇ ಬಾಬರ್​​ನನ್ನು ಹಿಗ್ಗಾಮುಗ್ಗಾ ಜಾಡಿಸಿದ್ದರು. ಅಲ್ಲದೆ, ಪಾಕಿಸ್ತಾನ ತಂಡದಿಂದ ಕೈ ಬಿಡುವಂತೆಯೂ ಒತ್ತಾಯ ಮಾಡಲಾಗಿತ್ತು. ತಮ್ಮ ಮಗನ ವಿರುದ್...