ಭಾರತ, ಜುಲೈ 19 -- ಟಿ20 ಕ್ರಿಕೆಟ್ ಇತಿಹಾಸದಲ್ಲಿ 13,000 ರನ್‌ಗಳ ಗಡಿ ದಾಟಿದ ಏಳನೇ ಬ್ಯಾಟರ್ ಎಂಬ ದಾಖಲೆಯನ್ನು ಇಂಗ್ಲೆಂಡ್‌ನ ಜೋಸ್ ಬಟ್ಲರ್ ತಮ್ಮದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಲಂಕಾಶೈರ್ ಪರ ಕಣಕ್ಕಿಳಿದ ಬಟ್ಲರ್, ಯಾರ್ಕ್‌ಶೈರ್ ವಿರುದ್ಧದ ಪಂದ್ಯದಲ್ಲಿ 46 ಎಸೆತಗಳಲ್ಲಿ 3 ಸಿಕ್ಸರ್‌ಗಳು ಮತ್ತು 7 ಫೋರ್‌ಗಳೊಂದಿಗೆ 77 ರನ್‌ಗಳ ಭರ್ಜರಿ ಇನಿಂಗ್ಸ್‌ ಆಡಿದರು. ಈ ಇನಿಂಗ್ಸ್‌ನೊಂದಿಗೆ ಟಿ20 ಕ್ರಿಕೆಟ್‌ನಲ್ಲಿ 13,000 ರನ್‌ಗಳ ಮೈಲಿಗಲ್ಲನ್ನು ತಲುಪಿದರು.

ಈ ಸಾಧನೆಯೊಂದಿಗೆ ಬಟ್ಲರ್, ಟಿ20 ಕ್ರಿಕೆಟ್‌ನಲ್ಲಿ 13,000 ರನ್‌ಗಳನ್ನು ಕಲೆಹಾಕಿದ ಇಂಗ್ಲೆಂಡ್‌ನ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಮೊದಲು ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ (13,814 ರನ್) ಈ ಗಡಿಯನ್ನು ದಾಟಿದ್ದರು. ವಿಶ್ವದಾದ್ಯಂತ ಈ ಸಾಧನೆ ಮಾಡಿದ ಏಳು ಬ್ಯಾಟರ್‌ಗಳ ಪೈಕಿ ಬಟ್ಲರ್ ಏಳನೇ ಸ್ಥಾನದಲ್ಲಿದ್ದಾರೆ.

432 ಟಿ20 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಬಟ್ಲರ್, 8,946 ಎಸೆತಗಳನ್ನು...