ಭಾರತ, ಮೇ 19 -- ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್​ನ 60ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ಟಿ20 ಕ್ರಿಕೆಟ್​ನಲ್ಲಿ ನೂತನ ಮೈಲಿಗಲ್ಲು ಸಾಧಿಸಿದ್ದಾರೆ.

ಸ್ವಲ್ಪದರಲ್ಲಿ ಶತಕ ವಂಚಿತರಾದರೂ ಅಜೇಯರಾಗಿ 53 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಸಹಿತ 93 ರನ್ ಗಳಿಸಿದ ಶುಭ್ಮನ್ ಗಿಲ್, ತಂಡವನ್ನು ಪ್ಲೇಆಫ್​ಗೇರಿಸುವುದರ ಜೊತೆಗೆ ತಾನೂ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ದಾಖಲೆಯನ್ನೂ ಮುರಿದಿದ್ದಾರೆ.

ಅರ್ಧಶತಕ ಬಾರಿಸುವ ಮೂಲಕ ಗಿಲ್ ಟಿ20 ವೃತ್ತಿಜೀವನದಲ್ಲಿ 5000 ರನ್​​ಗಳ ಮೈಲಿಗಲ್ಲು ದಾಟಿದರು. ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ವೇಗವಾಗಿ 5000 ರನ್ ಪೂರೈಸಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. ತಾನು 21 ರನ್ ಗಳಿಸಿದ್ದಾಗ ಈ ಸಾಧನೆ ಮಾಡಿದ್ರು. ಇದಕ್ಕೂ ಮುನ್ನ ವಿರಾಟ್ 2ನೇ ಸ್ಥಾನದಲ್ಲಿದ್ದರು.

ಶುಭ್ಮನ್ 33 ಎಸೆತ...