ಭಾರತ, ಮಾರ್ಚ್ 15 -- ಟೀಮ್ ಇಂಡಿಯಾ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್​ಗೆ (T20I Cricket) ನಿವೃತ್ತಿ ಘೋಷಿಸಿದ್ದಾರೆ. 2024ರ ಟಿ20 ವಿಶ್ವಕಪ್ (T20 World Cup 2024) ಜಯಿಸಿದ ನಂತರ ಕೊಹ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು. ಇದು ಕೋಟ್ಯಂತರ ಅಭಿಮಾನಿಗಳನ್ನು ತೀವ್ರ ನಿರಾಸೆಗೊಳಿಸಿತ್ತು. ಇದೀಗ ಕೊಹ್ಲಿ ಅವರು ಮತ್ತೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳುವ ಕುರಿತು ಮಾತನಾಡಿದ್ದಾರೆ. ಆದರೆ ಇದು ತಮಾಷೆಯಾಗಿ ಹೇಳಿದ್ದು! ಒಂದು ವೇಳೆ ಮರಳಿದರೂ ಆ ಪಂದು ಪಂದ್ಯಕ್ಕೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಜೂನ್ 29ರಂದು ನಡೆದ ಟಿ20 ವಿಶ್ವಕಪ್ ಫೈನಲ್​ನಲ್ಲಿ ಸೌತ್ ಆಫ್ರಿಕಾ ಮಣಿಸಿ ಪ್ರಶಸ್ತಿ ಗೆದ್ದ​ ನಂತರ ಭಾರತದ ಮಾಜಿ ನಾಯಕ ಈ ಸ್ವರೂಪದಿಂದ ನಿವೃತ್ತರಾಗಿದ್ದರು. ಆದರೆ ಈಗ ಅವರು ಕೇವಲ ಒಂದು ಪಂದ್ಯಕ್ಕೆ ಮರಳುವ ಸಾಧ್ಯತೆಯಿದೆ. 2028ರ ಲಾಸ್ ಏಂಜಲೀಸ್ ಪುರುಷರ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ತಲುಪಿದರೆ, ನಿವೃತ್ತಿಯಿಂದ ಯು-ಟರ್ನ...