Bengaluru, ಮಾರ್ಚ್ 6 -- ಕಲರ್ಸ್‌ ಕನ್ನಡದಲ್ಲಿ ಸಂಜೆ 5:30ರಿಂದ ರಾತ್ರಿ 10:30ರ ವರೆಗೆ ಒಟ್ಟು 9 ಸೀರಿಯಲ್‌ಗಳು ಪ್ರಸಾರವಾಗುತ್ತವೆ. ಆ ಒಂಭತ್ತು ಸೀರಿಯಲ್‌ಗಳ ಪೈಕಿ ಎಂಟನೇ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನ ಪಡೆದ ಸೀರಿಯಲ್‌ ಯಾವುದು, ಇಲ್ಲಿದೆ ವಿವರ.

ಕಲರ್ಸ್‌ ಕನ್ನಡದ ನಂಬರ್‌ 1 ಸೀರಿಯಲ್‌ ಎನಿಸಿರುವ ಭಾಗ್ಯಲಕ್ಷ್ಮೀ 8ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ನಂಬರ್‌ 1 ಸ್ಥಾನದಲ್ಲಿದೆ. ಮಹಾಸಂಚಿಕೆ ಪ್ರಸಾರ ಮಾಡಿ 6.1 ಟಿವಿಆರ್‌ ಪಡೆದುಕೊಂಡಿದೆ.

ಅದೇ ರೀತಿ ಕಲರ್ಸ್‌ನ ಲಕ್ಷ್ಮೀ ಬಾರಮ್ಮ ಸೀರಿಯಲ್ ಎಂಟನೇ ವಾರದ ಟಿಆರ್‌ಪಿಯಲ್ಲಿ 5.4 ಟಿವಿಆರ್‌ ಪಡೆದುಕೊಂಡು, ಎರಡನೇ ಸ್ಥಾನದಲ್ಲಿದೆ. ಇತ್ತೀಚಿನ ಕೆಲ ವಾರಗಳಿಂದ ಈ ಸೀರಿಯಲ್‌ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದೆ.

ಕಲರ್ಸ್‌ ಕನ್ನಡದ ಇನ್ನೊಂದು ಟಾಪ್‌ ಧಾರಾವಾಹಿಯಲ್ಲಿ ಇರುವುದು ರಾಮಾಚಾರಿ. ಈ ಸೀರಿಯಲ್‌ ಎಂಟನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ 4.8 ಟಿವಿಆರ್‌ ಪಡೆದು ಮೂರನೇ ಸ್ಥಾನದಲ್ಲಿದೆ.

ನಿನಗಾಗಿ ಧಾರಾವಾಹಿಯೂ ಕಿರುತೆರೆ ವೀಕ್ಷಕರ ಗಮನ ...