Bengaluru, ಜನವರಿ 30 -- Kannada Serial TRP: ಕನ್ನಡ ಕಿರುತೆರೆ ಧಾರಾವಾಹಿಗಳ ಮೂರನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದೆ. ಈ ಮೂರನೇ ವಾರದ ಡೇಟಾದಲ್ಲಿ ಇದೀಗ ಮತ್ತೊಂದು ಸೀರಿಯಲ್‌ ಟಾಪ್‌ ಸ್ಥಾನಕ್ಕೆ ಬಂದಿದೆ. ಅಂದರೆ, ಮೊದಲ ವಾರ ಲಕ್ಷ್ಮೀ ನಿವಾಸ, ಎರಡನೇ ವಾರ ಅಣ್ಣಯ್ಯ, ಇದೀಗ ಮೂರನೇ ವಾರದಲ್ಲಿ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಹೆಚ್ಚು ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ. ಹಾಗಾದರೆ, ಟಿಆರ್‌ಪಿ ಲೆಕ್ಕಾಚಾರದಲ್ಲಿ ಕನ್ನಡದ ಟಾಪ್‌ ಹತ್ತು ಸೀರಿಯಲ್‌ಗಳು ಯಾವವು? ಜೀ ಕನ್ನಡದ ಧಾರಾವಾಹಿಗಳೆಷ್ಟು, ಕಲರ್ಸ್‌ ಕನ್ನಡದ ಧಾರಾವಾಹಿಗಳೆಷ್ಟು? ಇಲ್ಲಿದೆ ವಿವರ.

ಶ್ರಾವಣಿ ಸುಬ್ರಮಣ್ಯ: ಜೀ ಕನ್ನಡದ ಯುವ ಜೋಡಿಯ ನವಿರು ಕಥೆ ಶ್ರಾವಣಿ ಸುಬ್ರಮಣ್ಯ. ಮದುವೆ ವಿಚಾರವಾಗಿ ಸುದ್ದಿಯಲ್ಲಿರುವ ಈ ಸೀರಿಯಲ್‌ ಇದೀಗ ಮೂರನೇ ವಾರದ ಟಿಆರ್‌ಪಿಯಲ್ಲಿ ಟಾಪ್‌ ಬಂದಿದೆ. 8.8 ರೇಟಿಂಗ್‌ ಪಡೆದು ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿ: ಮೊಬೈಲ್ ನೋಡುತ್ತಾ ಕುಳಿತ ಜಯಂತ್‌ನ ಪ್ರಶ್ನಿಸಿದ ಜಾಹ್ನವಿ; ಮನೆಯಲ್ಲಿರುವ ಸಿಸಿಟಿವಿ ವಿಚಾರ ಬಯ...