Bengaluru, ಮಾರ್ಚ್ 13 -- Colors Kannada Serial TRP: ಕನ್ನಡ ಕಿರುತೆರೆಯಲ್ಲಿ ಕಲರ್ಸ್‌ ಕನ್ನಡದ ಸೀರಿಯಲ್‌ಗಳ ಪೈಕಿ 9ನೇ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನ ಪಡೆದ ಸೀರಿಯಲ್‌ ಯಾವುದು? ಯಾವ ಧಾರಾವಾಹಿ ಟಾಪ್‌, ಯಾವ ಸೀರಿಯಲ್‌ ಕುಸಿತ ಕಂಡಿದೆ? ಕಲರ್ಸ್‌ ಕನ್ನಡದಲ್ಲಿ ನಿತ್ಯ ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ, ರಾಮಾಚಾರಿ, ನಿನಗಾಗಿ, ವಧು, ಯಜಮಾನ, ಭಾರ್ಗವಿ, ಕರಿಮಣಿ, ದೃಷ್ಟಿಬೊಟ್ಟು ಸೇರಿ ಒಟ್ಟು 9 ಧಾರಾವಾಹಿಗಳು ಪ್ರಸಾರವಾಗುತ್ತವೆ. ಆ ಪೈಕಿ 9ನೇ ವಾರದ ಟಿಆರ್‌ಪಿಯಲ್ಲಿ ಈ ಸೀರಿಯಲ್‌ಗಳು ಪಡೆದ ಟಿಆರ್‌ಪಿಯ ಮಾಹಿತಿ ಇಲ್ಲಿದೆ.

ಕಲರ್ಸ್‌ ಕನ್ನಡದಲ್ಲಿ ನಂಬರ್‌ 1 ಧಾರಾವಾಹಿ ಎಂದರೆ ಅದು ಭಾಗ್ಯಲಕ್ಷ್ಮೀ. ಸುಷ್ಮಾ ರಾವ್‌ ಮತ್ತು ಸುದರ್ಶನ್‌ ರಂಗಪ್ರಸಾದ್‌ ಮುಖ್ಯಭೂಮಿಕೆಯ ಈ ಸೀರಿಯಲ್‌, 9ನೇ ವಾರದ ಟಿಆರ್‌ಪಿ ರೇಟಿಂಗ್‌ ಲೆಕ್ಕಾಚಾರದಲ್ಲಿ 5.6 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ.

ನಂತರದ ಸ್ಥಾನದಲ್ಲಿ ಕಲರ್ಸ್‌ನ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸಹ ಟಾಪ್‌ ಓಟದಲ್ಲಿದೆ. ಮೊದಲ ಎರಡು ಸ್ಥಾನಗಳಲ್ಲಿ ಅಕ್ಕ ...