Bengaluru, ಫೆಬ್ರವರಿ 14 -- Colors Kannada Serials TRP: ಕಲರ್ಸ್‌ ಕನ್ನಡದ ಪ್ರಮುಖ ಧಾರಾವಾಹಿಗಳು ಎನಿಸಿಕೊಂಡಿರುವ ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ ಮತ್ತು ರಾಮಾಚಾರಿ ಸೀರಿಯಲ್‌ಗಳ ಟಿಆರ್‌ಪಿಯಲ್ಲಿ ಕುಸಿತ ಕಂಡಿದೆ. ಐದನೇ ವಾರದ ಟಿಆರ್‌ಪಿಯಲ್ಲಿ ಕಲರ್ಸ್‌ ಕನ್ನಡದ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಪಡೆದ 3.6 ಟಿವಿಆರ್‌ ನಂಬರೇ ಹೆಚ್ಚು. ಇನ್ನುಳಿದಂತೆ, ಪ್ರಮುಖ ಸೀರಿಯಲ್‌ಗಳ ಜತೆಗೆ ಇತ್ತೀಚೆಗಷ್ಟೇ ಆರಂಭವಾದ ಎರಡು ಹೊಸ ಸೀರಿಯಲ್‌ಗಳು ವೀಕ್ಷಕನನ್ನು ಮೋಡಿ ಮಾಡುವಲ್ಲಿ ಹಿಂದುಳಿದಿವೆ. ಹಾಗಾದರೆ, ಕಲರ್ಸ್‌ ಕನ್ನಡ ಸೀರಿಯಲ್‌ಗಳು ಪಡೆದ ಟಿಆರ್‌ಪಿ ಎಷ್ಟು? ಇಲ್ಲಿದೆ ವಿವರ.

ಕಳೆದ ವರ್ಷಾಂತ್ಯದ ವೇಳೆ ಕಲರ್ಸ್‌ ಕನ್ನಡದ ಲಕ್ಷ್ಮೀ ಬಾರಮ್ಮ ನಂಬರ್‌ 1 ಸೀರಿಯಲ್‌ ಆಗಿ ಹೊರಹೊಮ್ಮಿತ್ತು. ಅದಾದ ಮೇಲೆ ಭಾಗ್ಯಲಕ್ಷ್ಮೀ, ರಾಮಾಚಾರಿ, ನಿನಗಾಗಿ ಸೀರಿಯಲ್‌ಗಳು 5.0 ಪ್ಲಸ್‌ ಟಿಆರ್‌ಪಿ ಗಿಟ್ಟಿಸಿಕೊಂಡಿದ್ದವು. ಆದರೆ, ಇದೀಗ ಐದನೇ ವಾರದ ಟಿಆರ್‌ಪಿ ರೇಟಿಂಗ್‌ ಲಿಸ್ಟ್‌ ಹೊರಬಿದ್ದಿದ್ದು, ಪ್ರಮುಖ ಸೀರಿಯಲ್‌ಗಳಿಗೆ ಕಡಿಮೆ ಟಿಆರ್‌ಪ...