Bengaluru, ಏಪ್ರಿಲ್ 24 -- 15ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಕುತೂಹಲಕ್ಕೆ ತೆರೆ ಬಿದ್ದಿದೆ. ಹೊಸದಾಗಿ ಶುರುವಾಗಿದ್ದ ಮುದ್ದು ಸೊಸೆಗೆ ವೀಕ್ಷಕ ಫಿದಾ ಆಗಿದ್ದಾನೆ. ಅದರಂತೆ, ಒಳ್ಳೆಯ ಟಿಆರ್‌ಪಿ ಸಹ ಈ ಸೀರಿಯಲ್‌ಗೆ ಸಿಕ್ಕಿದೆ.

ಜೀ ಕನ್ನಡದ 15ನೇ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸೀರಿಯಲ್‌ ಎಂಬ ಪಟ್ಟವನ್ನು ಮತ್ತೆ ಪಡೆದುಕೊಂಡಿದೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್.‌ ಈ ಸೀರಿಯಲ್‌ 7.3 ಟಿಆರ್‌ಪಿ ಪಡೆದು ಅತಿ ಹೆಚ್ಚು ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ.

ಜೀ ಕನ್ನಡದ ಇನ್ನೊಂದು ಫ್ಯಾಂಟಸಿ ಹಾರರ್‌ ಸಿನಿಮಾ ನಾ ನಿನ್ನ ಬಿಡಲಾರೆ ಧಾರಾವಾಹಿ 15ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ 7.1 ಟಿವಿಆರ್‌ ಪಡೆದು ಎರಡನೇ ಸ್ಥಾನದಲ್ಲಿದೆ.

ಇನ್ನು ಜೀ ಕನ್ನಡದ ಒಂದು ಗಂಟೆ ಪ್ರಸಾರ ಕಾಣುವ ಲಕ್ಷ್ಮೀ ನಿವಾಸ ಸೀರಿಯಲ್‌ ರೋಚಕ ಟ್ವಿಸ್ಟ್‌ ಜತೆಗೆ ನೋಡುಗರನ್ನು ಸೆಳೆದಿದೆ. ಈ ಸೀರಿಯಲ್‌ 7.0 ಟಿಆರ್‌ಪಿ ಪಡೆದು ಮೂರನೇ ಸ್ಥಾನದಲ್ಲಿ ಗಟ್ಟಿಯಾಗಿ ನಿಂತಿದೆ.

ಇನ್ನು ಆಗೊಮ್ಮೆ ಈಗೊಮ್ಮೆ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟು ಮರಳುವ ಜ...