ಬೆಂಗಳೂರು, ಮಾರ್ಚ್ 9 -- ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲೂ ಭಾರತ ತಂಡ ಟಾಸ್ ಗೆದ್ದಿಲ್ಲ. ಇದು ಮಾತ್ರವಲ್ಲ, ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ನಾಯಕ ರೋಹಿತ್​ ಶರ್ಮಾ ಟಾಸ್ ಗೆದ್ದೇ ಇಲ್ಲ ಎನ್ನುವುದು ವಿಪರ್ಯಾಸ. ಇದು ಮಾತ್ರವಲ್ಲ, ಫೈನಲ್ ಸೇರಿ ಟೀಮ್ ಇಂಡಿಯಾ ಸತತ 15 ಏಕದಿನ ಪಂದ್ಯಗಳಲ್ಲಿ ಟಾಸ್ ಸೋತಿದೆ. ಇದು ವಿಶ್ವ ದಾಖಲೆಯೂ ಹೌದು. ಯಾವೊಂದು ತಂಡವೂ ಸತತ 15 ಸೋತ ಇತಿಹಾಸ ಇಲ್ಲ. ಈ ಪೈಕಿ ರೋಹಿತ್​ ಶರ್ಮಾ ಸತತ 12 ಬಾರಿ ಸೋತು ಅಷ್ಟೇ ಸೋಲು ಕಂಡಿರುವ ವೆಸ್ಟ್​ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ದಾಖಲೆ ಸಮಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಟಾಸ್ ಹೇಗೆ ಗೆಲ್ಲಬೇಕೆಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸಲಹೆ ನೀಡಿದ್ದಾರೆ.

ಟಾಸ್ ಫಲಿತಾಂಶ ಬಂದ ಕೂಡಲೇ ಕಾಮೆಂಟರಿ ಮಾಡುತ್ತಿದ್ದ ಹರ್ಭಜನ್ ಸಿಂಗ್ ಆಶ್ಚರ್ಯಚಕಿತರಾಗಿದ್ದಾರೆ. ಇದರ ನಂತರ ಟಾಸ್ ಗೆಲ್ಲುವುದು ಹೇಗೆ ಎಂದು ಭಜ್ಜಿ ರೋಹಿತ್​ಗೆ ಟಿಪ್ಸ್ ಕೊಟ್ಟಿದ್ದಾರೆ. ರೋಹಿತ್ ಟಾಸ್ ನಾಣ್ಯವನ್ನು ತನ್ನ ಬಳಿಗೆ ತನ್ನಿ. ನಾಣ್ಯಕ್ಕೆ ಹೋಮ-ಹವ...