ಭಾರತ, ಏಪ್ರಿಲ್ 19 -- ಐಪಿಎಲ್‌ ಪಂದ್ಯಗಳ ಸಮಯದಲ್ಲಿ ಆಗಾಗ ಕೆಲವೊಂದು ಅಪರೂಪದ ಸನ್ನಿವೇಶಗಳು ನಡೆಯುತ್ತವೆ. ಶನಿವಾರ (ಏಪ್ರಿಲ್‌ 19) ದಿನದ ಎರಡನೇ ಪಂದ್ಯದ ಆರಂಭದಲ್ಲಿಯೇ ಇಂತಹ ಅಪರೂಪದ ಘಟನೆಯೊಂದು ನಡೆದಿದೆ. ರಾಜಸ್ಥಾನ್‌ ರಾಯಲ್ಸ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ (Rajasthan Royals vs Lucknow Super Giants) ತಂಡಗಳ ನಡುವಿನ ಪಂದ್ಯದ ಆರಂಭದಲ್ಲಿ ಟಾಸ್‌ ವೇಳೆ ಹಾಸ್ಯಮಯ ಸನ್ನಿವೇಶ ನಡೆದಿದೆ. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಮತ್ತು ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್, ಪಂದ್ಯವನ್ನು ತಮಾಷೆಯಾಗಿ ಆರಂಭಿಸಿದ್ದಾರೆ.

ಮ್ಯಾಚ್‌ ರೆಫ್ರಿ ತವರು ತಂಡದ ನಾಯಕ ಪರಾಗ್ ಕೈಗೆ ಟಾಸ್‌ ಪ್ರಕ್ರಿಯೆಗೆ ನಾಣ್ಯವನ್ನು ಕೊಟ್ಟರು. ಆ ತಕ್ಷಣವೇ ಪರಾಗ್‌ ನಾಣ್ಯವನ್ನು ಗಾಳಿಯಲ್ಲಿ ಚಿಮ್ಮಿಸಿದರು. ಎದುರಾಳಿ ತಂಡದ ನಾಯಕ ಆ ಸಮಯದಲ್ಲಿ ತಮ್ಮ ಆಯ್ಕೆಯನ್ನು ಜೋರಾಗಿ ಹೇಳಬೇಕು. ಆದರೆ ಪಂತ್ ತಮ್ಮ ಆಯ್ಕೆಯನ್ನು ಹೇಳಲು ಮರೆತರು. ನಾಣ್ಯ ಕೆಳಗೆ ಬಿದ್ದರೂ, ಪಂತ್‌ ಆಯ್ಕೆ ಬರಲಿಲ್ಲ. ಹೀಗಾಗಿ ...