ಭಾರತ, ಫೆಬ್ರವರಿ 3 -- ನೆದರ್ಲೆಂಡ್ಸ್​ನ ವಿಜ್ಕ್​ ಆನ್​ಜೀನಲ್ಲಿ ಜರುಗಿದ ಫೈನಲ್ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್​ ಪ್ರಜ್ಞಾನಂದ (R Pragnanandhaa) ಅವರು 87 ನೇ ಆವೃತ್ತಿಯ ಟಾಟಾ ಸ್ಟೀಲ್ ಮಾಸ್ಟರ್ಸ್ 2025 (Tata Steel Masters 2025) ಪ್ರಶಸ್ತಿ ಗೆದ್ದು ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತದ ವಿಶ್ವ ಚಾಂಪಿಯನ್​ ಡಿ ಗುಕೇಶ್ (D Gukesh) ಅವರನ್ನು ಮಣಿಸಿದ ಪ್ರಜ್ಞಾನಂದ ಪ್ರತಿಷ್ಠಿತ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಉತ್ತಮ ಪ್ರದರ್ಶನದ ನಡುವೆಯೂ ಗುಕೇಶ್ ರನ್ನರ್​ಅಪ್ ಆದರು.

13ನೇ ಸುತ್ತಿನಲ್ಲಿ ಹಾಲೆಂಡ್​ನ ಜೋರ್ಡನ್​​ ವ್ಯಾನ್ ಫಾರೆಸ್ಟ್ ವಿರುದ್ಧ ಗುಕೇಶ್ ಡ್ರಾ ಸಾಧಿಸಿದ್ದರೆ, ಸರ್ಬಿಯಾದ ಅಲೆಕ್ಸಿ ಸರನಾ ವಿರುದ್ಧ ಪ್ರಜ್ಞಾನಂದ ಗೆಲುವು ಸಾಧಿಸಿದ್ದರು. 13ನೇ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಪ್ರಜ್ಞಾನಂದ ಸೋತರೆ, ತಮ್ಮ ದೇಶವಾಸಿ ಅರ್ಜುನ್ ಎರಿಗೈಸಿ ವಿರುದ್ಧ ಗುಕೇಶ್ ಪರಾಭವಗೊಂಡರು. ಇಬ್ಬರೂ ಆಟಗಾರರು ತಮ್...