ಭಾರತ, ಮಾರ್ಚ್ 1 -- 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ (Champions Trophy 2024) ಇಂಗ್ಲೆಂಡ್ ತಂಡವು (England Cricket Team) ಹೊರಗುಳಿದ ಬೆನ್ನಲ್ಲೇ ಜೋಸ್ ಬಟ್ಲರ್ (Jos Buttler) ವೈಟ್​ಬಾಲ್ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನಾದಿನ ಕ್ಯಾಪ್ಟನ್ಸಿ ತೊರೆಯುವ ಕುರಿತು ಘೋಷಿಸಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ತಂಡದ ಅಂತಿಮ ಲೀಗ್ ಪಂದ್ಯದಲ್ಲಿ ಬಟ್ಲರ್, ದಕ್ಷಿಣ ಆಫ್ರಿಕಾ ವಿರುದ್ಧ ನಾಯಕರಾಗಿ ಕೊನೆಯದಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಬಟ್ಲರ್​ ನಂತರ ಇಂಗ್ಲೆಂಡ್​ನ ಏಕದಿನ, ಟಿ20ಐ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಯಾರಿಗಿದೆ? ಅಂತಹ ಸಂಭವ ಇರುವ ಮೂವರು ಆಟಗಾರರ ಪಟ್ಟಿ ಇಲ್ಲಿದೆ. ಅದರತ್ತ ಒಂದು ನೋಟ.

ಇಂಗ್ಲೆಂಡ್ ತಂಡವನ್ನು ಕೆಲವು ತಿಂಗಳ ಹಿಂದೆ ಹ್ಯಾರಿ ಬ್ರೂಕ್ (Harry Brook) ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡದ ಜವಾಬ್ದಾರಿ ಹೊತ್ತುಕೊಂಡಿದ್ದ...