ಭಾರತ, ಮಾರ್ಚ್ 20 -- ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್‌ 18ನೇ ಆವೃತ್ತಿಯಲ್ಲಿ ಮಾರ್ಚ್ 25ರಂದು ತನ್ನ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ತಂಡದ ಎದುರಾಳಿ ಪಂಜಾಬ್ ಕಿಂಗ್ಸ್. ಕಳೆದ ಆವೃತ್ತಿಯು ಜಿಟಿ ಪಾಲಿಗೆ ಕಹಿಯಾಗಿತ್ತು. ಅದೇ ಮೊದಲ ಬಾರಿಗೆ ಫೈನಲ್‌ ಮಾತ್ರವಲ್ಲದೆ ನಾಕೌಟ್‌ ಹಂತಕ್ಕೆ ಅರ್ಹತೆ ಪಡೆಯಲು ತಂಡ ವಿಫಲವಾಯ್ತು. ತಂಡದ ಕಳಪೆ ಫಲಿತಾಂಶದ ಹೊರತಾಗಿಯೂ, ತಂಡದ ಮ್ಯಾನೇಜ್‌ಮೆಂಟ್‌ ಶುಭ್ಮನ್ ಅವರನ್ನು ನಾಯಕನನ್ನಾಗಿ ಉಳಿಸಿಕೊಂಡಿದೆ. ಮೆಗಾ ಹರಾಜಿನಲ್ಲಿ ತಂಡವನ್ನು ಮತ್ತಷ್ಟು ಬಲಿಷ್ಠವಾಗಿಸಿರುವ ಜಿಟಿ, ಈ ಬಾರಿ ಎರಡನೇ ಕಪ್‌ ಗೆಲ್ಲುವ ವಿಶ್ವಾಸದಲ್ಲಿದೆ.

ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ ಗುಜರಾತ್‌, 2022ರಲ್ಲಿ ಟ್ರೋಫಿಯನ್ನು ಗೆದ್ದು ಸಂಭ್ರಮಿಸಿತು. 2023ರಲ್ಲಿಯೂ ಸತತ ಎರಡನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆಯಿತು. ಕಳೆದ ಬಾರಿ ವೈಫಲ್ಯ ಅನುಭವಿಸಿದ ಬಳಿಕ ಈ ಬಾರಿ ತಂಡದಲ್ಲಿ ಮೇಜರ್‌ ಸರ್ಜರಿ ನಡೆದಿದೆ. ಬಲಿಷ್ಠ ಆಟಗಾರರಾದ ಮೊಹ...