ಭಾರತ, ಮಾರ್ಚ್ 3 -- ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳನ್ನು ಪರಿಚಯಿಸುವ ಪುಸ್ತಕವನ್ನು ಚಲನಚಿತ್ರ ಅಕಾಡೆಮಿ ಪ್ರಕಟಿಸಿ ವಿತರಿಸುತ್ತಿದೆ. ಈ ಪುಸ್ತಕದಲ್ಲಿನ ಕನ್ನಡ ಅನುವಾದದಲ್ಲಿರುವ ತಪ್ಪುಗಳ ಕುರಿತು ದಿನೇಶ್‌ ಅಮಿನ್‌ಮಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದಿದ್ದಾರೆ. ಜತೆಗೆ, ಆ ಪುಸ್ತಕದ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕನ್ನಡ ಅನುವಾದವನ್ನು ಗೂಗಲ್‌ ಅನುವಾದ ಮಾಡಿದ್ದಾರೆಯೇ ಎಂಬ ಅನುಮಾನ ಹುಟ್ಟಿಸುತ್ತದೆ. ಆರೈಕೆ ಎಂದಾಗಬೇಕಾಗಿದ್ದಲ್ಲಿ "ಹಾರೈಕೆ" ಎಂದಿದೆ. Stumbling pub musician ಎನ್ನುವುದನ್ನು ಅರೆಬರೆಬೆಂದ ಪಬ್‌ ಸಂಗೀತಗಾರ ಎಂದು ಅನುವಾದ ಮಾಡಲಾಗಿದೆ. ಗರ್ಭಧಾರಣೆಯನ್ನು ದುರ್ಬಲಗೊಳಿಸಲು ಮಿರಿ ಪ್ರಯತ್ನಿಸುತ್ತಾಳೆ ಎಂದೆಲ್ಲ ಕಾಗುಣಿತ, ವ್ಯಾಕರಣ ತಪ್ಪುಗಳೇ ಮೇಳೈಸಿವೆ.

ಫೇಸ್‌ಬುಕ್‌ನಲ್ಲಿ ದಿನೇಶ್‌ ಅಮಿನ್‌ಮಟ್ಟು ಹೀಗೆ ಬರೆದಿದ್ದಾರೆ. "ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್...