ಭಾರತ, ಮಾರ್ಚ್ 29 -- ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಹಾಗೂ ರಜತ್ ಮಾರಕಾಸ್ತ್ರ ಹಿಡಿದು ರೀಲ್ಸ್‌ ಮಾಡಿ ಕೇಸ್‌ ಆಗಿತ್ತು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ವೈರಲ್ ಆಗಿತ್ತು. ಈ ವಿಚಾರವಾಗಿ ರಜತ್ ಮತ್ತು ವಿನಯ್ ಗೌಡ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಈಗ ಜೈಲಿನಿಂದ ಹೊರ ಬಂದ ವಿನಯ್ ಗೌಡ ರೀಲ್ಸ್‌ ವಿಚಾರವಾಗಿ ಮಾತನಾಡಿದ್ದಾರೆ.

ಜೈಲಿನಿಂದ ಹೊರ ಬರುವ ಸಂದರ್ಭದಲ್ಲಿ ಸಾಕಷ್ಟು ಜನರು ಅವರನ್ನು ಮಾತನಾಡಿಸಲು ಪ್ರಯತ್ನಪಟ್ಟರೂ ಅವರು ಮಾತಾಡಿರಲಿಲ್ಲ. ಮಾಧ್ಯಮಗಳಿಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕುಳಿತು ಮಾತಾಡೋಣ ಎಂದಷ್ಟೇ ಹೇಳಿದ್ದರು. ಇದೀಗ ಅವರೇ ಮಾತನಾಡಿದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಾನು ಮಾಡಿದ್ದು ತಪ್ಪು, ಆ ತಪ್ಪಿಗೆ ನಾನು ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

ನನ್ನ ಬಿಗ್ ಬ್ರದರ್, ನನ್ನ ಹಿತೈಷಿ, ನನ್ನ ಗಾಡ್ ಫಾದರ್ ಕಿಚ್ಚ ಸುದೀಪ್‌ ಸರ್ ಅವರಿಗೆ ವಿಶೇಷ ಧನ್ಯವಾದಗಳು, ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನನ್ನ ಮತ್ತು ನನ...