ಭಾರತ, ಏಪ್ರಿಲ್ 26 -- ಭಾರತದ ಚಿತ್ರರಂಗದ ಖ್ಯಾತನಟ, ವಿಶೇಷವಾಗಿ ತಮಿಳು ಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ತಲೈವಾ "ರಜನಿಕಾಂತ್‌" ಮಹಾನ್‌ ದೈವ ಭಕ್ತರೂ ಹೌದು. ವಿಶೇಷವಾಗಿ ಇವರಿಗೆ ಅಧ್ಯಾತ್ಮದ ಕುರಿತು ವಿಶೇಷ ಒಲವು. ಆಗಾಗ ಹಿಮಾಲಯಕ್ಕೆ ಹೋಗಿ ಧ್ಯಾನ ಮಾಡಿ ಬರುತ್ತಾರೆ. ಶುಕ್ರವಾರ ಇವರು ಜೈಲರ್‌ 2 ಸಿನಿಮಾದ ಶೂಟಿಂಗ್‌ಗೆ ಹೋಗಿದ್ದಾರೆ. ಅಲ್ಲೇ ದಾರಿಯಲ್ಲಿ ಸಿಕ್ಕ ಸ್ಥಳೀಯ ದೇಗುಲಕ್ಕೆ ಇವರು ಭೇಟಿ ನೀಡಿದ್ದಾರೆ. ತಮಿಳುನಾಡಿನಿಂದ ಕೊಯಮತ್ತೂರು ಸಮೀಪ ಇವರು ಅನೈಕಟ್ಟಿ ಹಿಲ್ಸ್‌ನಲ್ಲಿರುವ ಸ್ಥಳೀಯ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಆ ದೇಗುಲದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲಿದ್ದ ಅಭಿಮಾನಿಗಳು ತಲೈವಾನ ನೋಡಿ ಖುಷಿಗೊಂಡಿದ್ದಾರೆ.

ರಜನಿಕಾಂತ್‌ ಅಭಿಮಾನಿಗಳ ಸೋಷಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ರಜನಿಕಾಂತ್‌ ಅವರು ಕಾರಿನಿಂದ ಇಳಿದು ದೇಗುಲದತ್ತ ಹೋಗುತ್ತಿರುವ ವಿಡಿಯೋವನ್ನು ಎಕ್ಸ್‌ನಲ್ಲಿ ಸಾಕಷ್ಟು ಜನರು ಪೋಸ್ಟ್‌ ಮಾಡಿದ್ದಾರೆ. ಅನೈಕಟ್ಟಿಯಿಂದ ಮನಗರೈಗೆ ಇವರು ಪ...