ಭಾರತ, ಮಾರ್ಚ್ 29 -- Amruthadhaare serial Yesterday Episode: ಭಾಗ್ಯಮ್ಮನಿಗೆ ಏನೋ ತಳಮಳವಾಗಿದೆ. ಸುಧಾ ಗಾಬರಿಯಿಂದ ಅತ್ತಿಗೆ ಎಂದು ಕರೆದಿದ್ದಾಳೆ. ಆಗ ಅಲ್ಲಿ ಅಪೇಕ್ಷಾ ಇರುತ್ತಾಳೆ. ಅಪೇಕ್ಷಾ ಓಡೋಡಿ ಬರುತ್ತಾಳೆ. ಭಾಗ್ಯಮ್ಮ ಕೋಪದಿಂದ ಅಪೇಕ್ಷಾಳ ಕೆನ್ನೆಗೆ ಹೊಡೆಯುತ್ತಾಳೆ. ಅಪರೂಪಕ್ಕೆ ಅಪೇಕ್ಷಾಗೆ ಕೋಪ ಬಂದಿಲ್ಲ. ಅಮ್ಮನಿಗೆ ಹಸಿವಾಗಿರಬಹುದು. ಅದಕ್ಕೆ ಕೋಪಗೊಂಡಿದ್ದಾಳೆ ಎನ್ನುತ್ತಾಳೆ ಅಪೇಕ್ಷಾ. ತಾನೇ ಊಟ ತರಿಸಿ ಕೈತುತ್ತು ತಿನ್ನಿಸುತ್ತಾಳೆ. ದೂರದಿಂದ ನೋಡುತ್ತಿದ್ದ ಪಾರ್ಥ "ಅಪೇಕ್ಷಾ ಇಷ್ಟೊಂದು ಒಳ್ಳೆಯವಲ್ಲ" ಎಂದು ಅಚ್ಚರಿಗೊಳ್ಳುತ್ತಾನೆ. ಇದೇ ಸಮಯದಲ್ಲಿ ಜೈದೇವ್‌ ಭೂಪತಿ ಮನೆಯಲ್ಲಿದ್ದಾನೆ. "ಅಂಕಲ್‌ ನಾನು ಇನ್ನೊಂದು ಮದುವೆಯಾಗಬೇಕೆಂದಿದ್ದೇನೆ. ದಿಯಾಳನ್ನು ಮದುವೆಯಾಗಬೇಕೆಂದುಕೊಂಡಿದ್ದೇನೆ" ಎನ್ನುತ್ತಾನೆ. "ಯಾಕೆ ಈ ದೃಢ ನಿರ್ಧಾರ" ಎಂದು ಭೂಪತಿ ಕೇಳುತ್ತಾರೆ. "ತುಂಬಾ ದಿನದ ಪ್ಲ್ಯಾನ್‌ ಅಂಕಲ್‌. ನನಗೆ ಮಲ್ಲಿ ಕಟ್ಟಿ ಬಿಟ್ಟಿದ್ದಾರೆ. ಮಲ್ಲಿನ ನೋಡಿದ್ರೆ ಅಸಹ್ಯವಾಗುತ್ತದೆ" ಎಂದು ಹೇಳುತ್ತಾನೆ. ಇವರಿ...