Hyderabad, ಏಪ್ರಿಲ್ 20 -- ಹೈದ್ರಾಬಾದ್:‌ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯ ಮಾತ್ರವಲ್ಲದೇ ಇತರೆ ಭಾಗಗಳಲ್ಲೂ ತನ್ನದೇ ಛಾಪು ಮೂಡಿಸಿರುವ ಹೈದ್ರಾಬಾದ್‌ನ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯು ಜೆಇಇ ಮುಖ್ಯ ಪರೀಕ್ಷೆ 2025 ರಲ್ಲಿ ದಾಖಲೆಯ ಸಾಧನೆ ಮಾಡಿದೆ ಮುಕ್ತ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ 1ನೇ ಸ್ಥಾನ, ಟಾಪ್ 10 ರಲ್ಲಿ 4 ಸ್ಥಾನ ಮತ್ತು 100 ಮತ್ತು 1000 ಕ್ಕಿಂತ ಕಡಿಮೆ ಶ್ರೇಯಾಂಕಗಳನ್ನು ಪಡೆದಿರುವುದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ.ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯು ಜೆಇಇ ಮುಖ್ಯ 2025 ರಲ್ಲಿ ದಾಖಲೆಯ ಪ್ರದರ್ಶನದೊಂದಿಗೆ ಎಂಜಿನಿಯರಿಂಗ್ ಪ್ರವೇಶ ತಯಾರಿಗಾಗಿ ಭಾರತದ ಪ್ರಮುಖ ಸಂಸ್ಥೆಯಾಗಿ ತನ್ನ ಸ್ಥಾನಮಾನವನ್ನು ಮತ್ತೊಮ್ಮೆ ಬಲಪಡಿಸಿದೆ ಎಂದು ಫಲಿತಾಂಶ ಬಳಿಕ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ತೆಲುಗು ರಾಜ್ಯಗಳಿಂದ ಬಂದ ವಂಗಾ ಅಜಯ್ ರೆಡ್ಡಿ (ಅರ್ಜಿ ಸಂಖ್ಯೆ: 250310255592) ಅಖಿಲ ಭಾರತ ಮುಕ್ತ ವಿಭಾಗದಲ್ಲಿ 300 ರಲ್ಲಿ 300 ಅಂಕಗಳನ್ನು ಗಳಿಸುವ ಮೂಲಕ ಅ...