ಭಾರತ, ಮೇ 27 -- ಈ ವರ್ಷದ ಮೊದಲ ಆರು ತಿಂಗಳುಗಳು ಕಳೆಯುತ್ತಿದೆ. ಈ ಸಮಯದಲ್ಲಿ ಬಿಡುಗಡೆಯಾದ ಸಿನಿಮಾಗಳು ಸುಮಾರು ನೂರು ಆಗಬಹುದು. ಕೆಲವೊಂದು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಿದವು. ಇನ್ನು ಕೆಲವು ಸಿನಿಮಾಗಳನ್ನು ನೋಡಲು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಜನರು ಥಿಯೇಟರ್‌ಗೆ ಆಗಮಿಸಿದ್ದರು. ಚಿತ್ರಮಂದಿರಗಳಲ್ಲಿ ಲಾಭ ಗಳಿಸಿದ ಸಿನಿಮಾಗಳ ಲೆಕ್ಕ ಬೆರಳೆಣಿಕೆಯಷ್ಟೇ ಇರುತ್ತದೆ. ಆದರೆ, ಈ ವರ್ಷ ಕನ್ನಡದ ಹಲವು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಿವೆ. ಕನ್ನಡ ಚಿತ್ರಗಳಿಗೆ ಒಟಿಟಿಗಳು ಸಿಗುತ್ತಿಲ್ಲ ಎಂಬ ಬೇಸರವನ್ನು ಕೆಲವು ಕನ್ನಡ ಸಿನಿಮಾಗಳು ನೀಗಿಸಿವೆ. ಕನ್ನಡದ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾದಗ ಭಾರತದ ಹಲವು ಭಾಷೆಯ ಪ್ರೇಕ್ಷಕರು ಆ ಸಿನಿಮಾಗಳನ್ನು ನೋಡಿ ಆನಂದಿಸಿದ್ದಾರೆ. ಸ್ಯಾಂಡಲ್‌ವುಡ್‌ ಚಿತ್ರಗಳು ಒಟಿಟಿ ಜಗತ್ತಿನಲ್ಲಿ ಹೆಚ್ಚು ಜನರಿಗೆ ತಲುಪಿವೆ. ಇದೇ ಕಾರಣಕ್ಕೆ ಜಿಯೋಹಾಟ್‌ಸ್ಟಾರ್‌, ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವಿಡಿಯೋ, ಜೀ5, ಸೋನಿ ಲಿವ್‌ ಸೇರಿದಂತೆ ಹಲವು...