ಭಾರತ, ಮೇ 14 -- ನೀವು ಅಮೆಜಾನ್‌ ಪ್ರೈಂ ವಿಡಿಯೋ ಚಂದಾದಾರಿಕೆ ಪಡೆದು ಕಂಟೆಂಟ್‌ಗಳನ್ನು ವೀಕ್ಷಿಸುತ್ತಿದ್ದೀರಾ? ಹಾಗಾದರೆ, ಜೂನ್‌ನಿಂದ ನಿಮಗೆ ಇದೇ ಒಟಿಟಿ ಕಡೆಯಿಂದ ಶಾಕಿಂಗ್‌ ಸುದ್ದಿಯೊಂದು ಬರಲಿದೆ. ಇಲ್ಲಿಯವರೆಗೂ ಜಾಹೀರಾತು ಮುಕ್ತ ಸಿನಿಮಾ, ಸಿರೀಸ್‌ ವೀಕ್ಷಿಸುತ್ತಿದ್ದ ಬಳಕೆದಾರರು, ಜೂನ್‌ನಿಂದ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಿದೆ! ಅಂದರೆ, ವೀಕ್ಷಣೆ ವೇಳೆ ಜಾಹೀರಾತುಗಳ ಅಡಚಣೆ ಬೇಡ ಎಂದರೆ ಹೆಚ್ಚುವರಿ ಹಣವನ್ನು ನೀಡಬೇಕಿದೆ. ಸದ್ಯ ಪ್ರೈಂ ವಿಡಿಯೋ ಕಂಪನಿಯ ಈ ನಡೆಗೆ ಚಂದಾದಾರರಿಂದ ವಿರೋಧ ವ್ಯಕ್ತವಾಗುತ್ತಿದೆ.

ಜೂನ್‌ 17ರಿಂದ ಅಮೆಜಾನ್‌ ಪ್ರೈಂ ತನ್ನ ಎಲ್ಲ ಕಂಟೆಂಟ್‌ಗಳ ನಡುವೆ ಸೀಮಿತ ಜಾಹೀರಾತುಗಳನ್ನು ಪ್ರಸಾರ ಮಾಡಲಿದೆ. ಈ ಜಾಹೀರಾತನ್ನು ತಪ್ಪಿಸಲು ಹೊಸ ಪ್ಯಾಕ್‌ವೊಂದನ್ನೂ ಪರಿಚಯಿಸಿದೆ ಅಮೆಜಾನ್‌ ಪ್ರೈಂ ವಿಡಿಯೋ. ಈ ಮೂಲಕ ಬಳಕೆದಾರರಿಂದ ಹೆಚ್ಚುವರಿ ಹಣ ಪಡೆಯಲಿದೆ ಈ ಸಂಸ್ಥೆ. ಹಾಗಾದರೆ, ಹಳೇ ಮತ್ತು ಹೊಸ ಚಂದಾದಾರರು ಪ್ರತಿ ತಿಂಗಳು ಮತ್ತು ವರ್ಷದ ಲೆಕ್ಕದಲ್ಲಿ ಎಷ್ಟೆಷ್ಟು ಹೆಚ್ಚುವರಿ ಹಣ ಪಾವತಿಸಬೇ...