Bengaluru, ಮೇ 25 -- ಜೂನ್ ತಿಂಗಳಲ್ಲಿ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳ ಆಗಮನವಾಗಲಿದೆ. ಅದರಲ್ಲಿ ಮಲಯಾಳಂನ ಬ್ಲಾಕ್‌ಬಸ್ಟರ್‌ ಹಿಟ್‌ ʻತುಡರಮ್‌ʼ ಸಹ ಒಟಿಟಿಗೆ ಬರಲಿದೆ.

ತುಡರುಮ್: ಮಲಯಾಳಂ ಸ್ಟಾರ್‌ ಮೋಹನ್‌ಲಾಲ್ ನಟಿಸಿರುವ ʻತುಡರುಮ್ʼ ಸಿನಿಮಾ ಹಿಟ್‌ ಆಗಿದೆ. ತರುಣ್ ಮೂರ್ತಿ ನಿರ್ದೇಶಿಸಿರುವ ಈ ಕ್ರೈಮ್ ಥ್ರಿಲ್ಲರ್ ಚಿತ್ರ, ಏಪ್ರಿಲ್ 26ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. 28 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರ, 200 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ಸಕ್ಸಸ್‌ ಆಗಿದೆ. ಈ ಸಿನಿಮಾ ಜೂನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ ಒಟಿಟಿಗೆ ಬರುವ ಸಾಧ್ಯತೆ ಇದೆ.

ಟೂರಿಸ್ಟ್ ಫ್ಯಾಮಿಲಿ: ಕಾಲಿವುಡ್‌ನ ʻಟೂರಿಸ್ಟ್ ಫ್ಯಾಮಿಲಿʼ ಸಿನಿಮಾ ಸೂಪರ್‌ ಹಿಟ್ ಆಗಿದೆ. ಈ ಚಿತ್ರದಲ್ಲಿ ಶಶಿಕುಮಾರ್ ಮತ್ತು ಸಿಮ್ರಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 16 ಕೋಟಿ ಬಜೆಟ್‌ನಲ್ಲಿ ಮೂಡಿಬಂದ ಈ ಸಿನಿಮಾ 75 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿದೆ. ಅಭಿಷಾನ್ ಜೀವಂತ್ ಈ ಚಿತ್ರಕ್ಕೆ ನಿರ್ದೇ...