ಭಾರತ, ಫೆಬ್ರವರಿ 23 -- ಭಾನುವಾರದ ಹೊತ್ತು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲೇ ಇರುತ್ತಾರೆ. ಈ ದಿನ ಸಂಜೆ ಹೊತ್ತಿಗೆ ಎಲ್ಲರೂ ಒಟ್ಟಿಗೆ ಕೂತು ಮನೆಯಲ್ಲೇ ಸಿನಿಮಾ ನೋಡುವ ಪ್ಲ್ಯಾನ್ ಹಾಕಿದ್ದರೆ ಜೀ 5 ನೋಡಿ. ಇದರಲ್ಲಿ ಒಂದಕ್ಕಿಂತ ಒಂದು ಅದ್ಭುತ ಕಥೆ ಹೊಂದಿರುವ ಬಾಲಿವುಡ್‌ ಸಿನಿಮಾಗಳಿವೆ. ಮನೆಮಂದಿಯೆಲ್ಲಾ ಕೂತು ನೋಡುವಂತಿರುವ ಟಾಪ್ 10 ಬಾಲಿವುಡ್ ಸಿನಿಮಾಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಥ್ರಿಲ್ಲರ್ ಕಥೆ ಹೊಂದಿರುವ ಕಡಕ್ ಸಿಂಗ್ ಸಿನಿಮಾವನ್ನು ಅನಿರುದ್ಧ ರಾಯ್ ಚೌಧರಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಅರುಣ್ ಕುಮಾರ್ 'ಎಕೆ' ಶ್ರೀವಾಸ್ತವ್ ಪಾತ್ರದಲ್ಲಿ ನಟಿಸಿದ್ದಾರೆ. ಎಕೆ ಅತ್ಯಂತ ಜಟಿಲ ಚಿಟ್-ಫಂಡ್ ಭ್ರಷ್ಟಾಚಾರ ಪ್ರಕರಣವನ್ನು ಭೇದಿಸಲು ಶ್ರಮಿಸುತ್ತಾರೆ. ಸಂಜನಾ ಸಾಂಘಿ ಅವರ ಮಗಳು ಸಾಕ್ಷಿಯಾಗಿ ನಟಿಸಿದರೆ, ಪಾರ್ವತಿ ತಿರುವೋತ್ತು ಈ ಚಿತ್ರದಲ್ಲಿ ಮಿಮಿ ಎಂಬ ನರ್ಸ್ ಪಾತ್ರದಲ್ಲಿ ನಟಿಸಿದ್ದಾರೆ.

2023ರಲ್ಲಿ ಬಿಡುಗಡೆಯಾದ ಸಿನಿಮಾವಿದು. ಅಪೂರ್ವ್ ಸಿಂಗ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ...