ಭಾರತ, ಮಾರ್ಚ್ 12 -- ಜೀ ಕನ್ನಡ ವಾಹಿನಿಯಲ್ಲಿ ಕಿರಣ್ ರಾಜ್ ಅಭಿನಯದ ಹೊಸ ಧಾರಾವಾಹಿ ಮೂಡಿಬರಲಿದೆ. ಈ ಧಾರಾವಾಹಿ ಶೀಘ್ರದಲ್ಲೇ ಪ್ರಸಾರವಾಗಲಿದೆ.

ಆದರೆ ಕಿರಣ್ ರಾಜ್‌ಗೆ ಯಾರು ನಾಯಕಿಯಾಗಿ ಸಾತ್ ನೀಡುತ್ತಾರೆ ಎಂದು ಇದುವರೆಗೂ ತಿಳಿದು ಬಂದಿಲ್ಲ. ಭವ್ಯಾ ಗೌಡ ಅವರ ಹೆಸರು ಚರ್ಚೆಯಲ್ಲಿದೆ.

ಆದರೆ ಕಿರಣ್ ರಾಜ್ ಈ ಹಿಂದೆ ಕನ್ನಡತಿ ಧಾರಾವಾಹಿಯಲ್ಲಿ ರಂಜನಿ ರಾಘವನ್ ಜತೆ ಅಭಿನಯಿಸಿದ ಕಾರಣ ಆ ಜೋಡಿಯೇ ಮತ್ತೆ ತೆರೆಮೇಲೆ ಬರಬಹುದು ಎಂದುಕೊಂಡವರೂ ಇದ್ದಾರೆ.

ಭವ್ಯಾ ಮತ್ತು ಕಿರಣ್ ರಾಜ್ ಜೋಡಿ ಚೆನ್ನಾಗಿರುತ್ತದೆ, ಹಾಗಾಗಿ ಭವ್ಯಾ ಗೌಡ ಅವರೇ ಈ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಬೇಕು ಎಂಬ ಮಾತುಗಳೂ ಇದೆ.

ಭವ್ಯಾ ಗೌಡ ಅಥವಾ ರಂಜನಿ ರಾಘವನ್ ಈ ಇಬ್ಬರಲ್ಲೇ ಯಾರಾದರೊಬ್ಬರು ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಾರಾ? ಅಥವಾ ಬೇರೆ ಯಾರಾದರೂ ನಾಯಕಿಯಾಗಬಹುದಾ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಈ ಹಿಂದೆ ಕನ್ನಡತಿ ಧಾರಾವಾಹಿಯಲ್ಲಿ ಭುವಿ ಮತ್ತು ಹರ್ಷ ಎಂಬ ಪಾತ್ರದಲ್ಲಿ ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಕಾಣಿಸಿಕೊಂಡ...